Header Ads
Header Ads
Breaking News

ಮಲ್ಪೆ:ಬಾಹುಬಲಿಗೆ ಹೃದಾಯಾಘಾತ ಪ್ರವಾಸಿಗರ ಅಚ್ಚುಮೆಚ್ಚಿನ ಬಾಹುಬಲಿ ಒಂಟೆಗೆ ಹೃದಾಯಾಘಾತ

ಮಲ್ಪೆ ಬೀಚಿನಲ್ಲಿ ಪ್ರವಾಸಿಗರ ಮನತಣಿಸುತ್ತಿದ್ದ ಬಾಹುಬಲಿ ಹೆಸರಿನ ಗಂಡು ಒಂಟೆ, ಇದ್ದಕಿದ್ದಂತೆ ಸಾವನಪ್ಪಿದ್ದೆ. ಸಾಮಾಜಿಕ ಕಾರ್ಯಕರ್ತರು ಮಾಲಿಕನ ಅಳಲಿಗೆ ಸ್ಪಂದಿಸಿ, ಕಳೇಬರ ವಿಲೇವಾರಿಗೊಳಿಸಲು ಸಹಕರಿಸಿದ ಘಟನೆ ಮಲ್ಪೆಯಿಂದ ವರದಿಯಾಗಿದೆ.ಮಧ್ಯಪದ್ರೇಶ ರಾಜ್ಯದ ಬಡಲಾನಿ ಜಿಲ್ಲೆಯ ಶತ್ರುಘ್ನ ಬಾಬುರಾವ್ ಎಂಬುವುರು ಕಳೆದ ೧೦ ವರ್ಷಗಳಿಂದ ಒಂಟೆ ಸವಾರಿಗಾಗಿ ಮೂರು ಗಂಡು ಒಂಟೆಗಳನ್ನು ಮಲ್ಪೆ ಬೀಚಿನಲ್ಲಿ ವ್ಯವಸ್ಥೆಗೊಳಿಸಿದ್ದರು. ಕಟ್ಟಪ್ಪ (14ವ), ಬಾಹುಬಲಿ (10ವ), ರಾಣಾ(8ವ) ಹೆಸರಿನ ಮೂರು ಒಂಟೆಗಳು ಬೀಚಿನಲ್ಲಿ ಸೇರುವ ಪ್ರವಾಸಿಗರನ್ನು ಬೆನ್ನ ಮೇಲೆ ಹೊತ್ತು, ಕಡಲ ತಡಿಯ ಮರಳ ರಾಶಿಯಲ್ಲಿ ಸುತ್ತಾಡಿಸಿ, ಮನ ತಣಿಸುತ್ತಿದ್ದವು. ಅದರಲ್ಲಿ ಶುಕ್ರವಾರ ಮಧ್ಯಾಹ್ನ ಗಿಡ-ಗಂಟಿ ಬೆಳೆದ ಜಾಗದಲ್ಲಿ, ಮೆಯಲು ಬಿಟ್ಟಿದ ಬಾಹುಬಲಿ ಹೆಸರಿನ 10 ವರ್ಷದ ಒಂಟೆ ಇದ್ದಕಿದ್ದಂತೆ ಬಿದ್ದು ಒದ್ದಾಡಿ ಸಾವನಪ್ಪಿದೆ. ಒಂಟೆಯ ಮಾಲಿಕ ಶತ್ರುಘ್ನ ಬಾಬುರಾವ್ ಅವರು ಒಂಟೆ ಸಾವಿಗೆ ಹೃದಯಘಾತ ಕಾರಣ ಇರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಹತ್ತು ತಿಂಗಳ ಹಿಂದೆ ಬಾಹುಬಲಿ ಒಂಟೆಯನ್ನು 1ಲಕ್ಷ 20 ಸಾವಿರ ಹಣ ಕೊಟ್ಟು ಮಧ್ಯಪ್ರದೇಶದಲ್ಲಿ ಖರೀದಿಸಿದ್ದೆ ಎಂದು ಮಾಲಿಕರು ಹೇಳಿದ್ದಾರೆ. ಸುಮಾರು 900 ಕೆಜಿ ಭಾರದ, 7 ಅಡಿ ಎತ್ತರದ, ಒಂಟೆಯ ಕಳೇಬರವನ್ನು ವಿಲೇವಾರಿಗೊಳಿಸಲು ಮಾಲಿಕ ಶುತ್ರಘ್ನನಿಗೆ ಸಮಸ್ಯೆ ಎದುರಾಗಿದೆ. ಒಂದೆಡೆ ಆತನ ಕುಟುಂಬದ ಸಂಸಾರ ರಥ ಸಾಗಿಸಲು ನೆರವಾಗುತ್ತಿದ್ದ ಒಂಟೆ ಬಾಹುಬಲಿಯ ಸಾವು ದುಃಖಿತಗೊಳಿಸಿದೆ. ದಿಕ್ಕು ಕಾಣದೆ ಅಸಹಾಯಕ ಸ್ಥಿತಿಯಲ್ಲಿದ್ದ ಶತ್ರುಘ್ನನ ನೆರವಿಗೆ ಉಡುಪಿಯ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಹಾಗೂ ಸ್ಥಳಿಯರಾದ ಗಣೇಶ್ ಮೆಂಡನ್, ಮಂಜುನಾಥ್, ದಯಾನಂದ ಕೊಳ ಅವರು ನೆರವಿಗೆ ಬಂದಿದ್ದಾರೆ. ದುಃಖಿತ ಒಂಟೆ ಮಾಲಿಕನಿಗೆ ಸಾಂತ್ವನ ಹೇಳಿದ್ದಾರೆ. ಕಳೇಬರದ ವಿಲೇವಾರಿಗೊಳಿಸುವ ವ್ಯವಸ್ಥೆ ಮಾಡಿದ್ದಾರೆ.ಮುಂದಾಳತ್ವ ವಹಿಸಿದ ನಿತ್ಯಾನಂದ ಒಳಕಾಡು ಅವರು ನಗರಸಭೆಗೆ ಮಾಹಿತಿ ನೀಡಿ. ಕಳೇಬರದ ಸಾಗಟಕ್ಕೆ ಲಾರಿಯನ್ನು ತರಿಸಿದ್ದಾರೆ. ಕ್ರೇನ್ ಮೂಲಕ ಒಂಟೆಯ ಕಳೇಬರವನ್ನು ಲಾರಿಗೆ ತುಂಬಿಸುವ ವ್ಯವಸ್ಥೆಗೊಳಿಸಿದ್ದಾರೆ. ನಂತರ ಸಾಮಾಜಿಕ ಕಾರ್ಯಕರ್ತರು ಕಳೇಬರಕ್ಕೆ ಹೂ ಹಾರ ಹಾಕಿ, ಅಂತಿಮ ನಮನ ಸಮರ್ಪಿಸಿ ನಗರ ಸಭೆಯ ಸ್ವಚ್ಚತಾ ಸಿಬ್ಭಂದಿಗೆ ಹಸ್ತಾಂತರಿಸಿದ್ದಾರೆ. ಸ್ವಲ್ಪ ಹೊತ್ತು ತಡವರಿಸಿದರೆ ಪರಿಸರದಲ್ಲಿ ವಾಸನೆ ಬೀಳುವ ಪರಿಸ್ಥಿತಿ ಎದುರಾಗಿತ್ತು ಸಾಮಾಜಿಕ ಕಾರ್ಯಕರ್ತರ ತಕ್ಷಣದ ಸ್ಪಂದನೆಗೆ, ಸ್ಥಳಿಯ ಸಾರ್ವಜನಿಕ ವಲಯದಲ್ಲಿ ಹರ್ಷ ವ್ಯಕ್ತವಾಯಿತು. ಉಡುಪಿಯಲ್ಲಿ ಒಂಟೆ ಸಾವು ಕಂಡ ಇದು ಪ್ರಥಮ ಪ್ರಕರಣ ಎಂದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತವಾಗಿದೆ.

Related posts

Leave a Reply