Header Ads
Breaking News

ಮಲ್ಪೆಯಿಂದ ತೆರಳಿದ್ದ ಮೀನುಗಾರಿಕಾ ಬೋಟ್ ಅವಘಡ : ಏಳು ಮೀನುಗಾರರ ರಕ್ಷಣೆ

ಮಲ್ಪೆಯಿಂದ ತೆರಳಿದ್ದ ಮೀನುಗಾರಿಕಾ ಬೋಟೊಂದು ಮಹಾರಾಷ್ಟ್ರದ ದೇವಘಡದಲ್ಲಿ ಅವಘಡಕ್ಕೀಡಾಗಿದೆ. ಅಪಾಯಕ್ಕೆ ಒಳಗಾದ ಏಳು ಮೀನುಗಾರರನ್ನು ರಕ್ಷಿಸಲಾಗಿದೆ. ಈ ಬೋಟ್ ದಿನೇಶ್ ತಿಂಗಳಾಯ ಅವರಿಗೆ ಸೇರಿದ್ದಾಗಿದ್ದು ’ಶಿವರಕ್ಷಾ’ ಹೆಸರಿನ ಮೀನುಗಾರಿಕಾ ಬೋಟು ಮಹಾರಾಷ್ಟ್ರದ ದೇವಘಡದಲ್ಲಿ ಅವಗಡಕ್ಕೀಡಾಗಿದೆ. ಬೋಟಿನ ಅಡಿಭಾಗಕ್ಕೆ ಹಾನಿಯಾಗಿದ್ದರಿಂದ ಬೋಟ್ ನ ಕೆಳ ಭಾಗಕ್ಕೆ ಹಾನಿಯಾಗಿದ್ದು ನೀರು ಒಳ ಬಂದು ಬೋಟ್ ಮುಳುಗಿದೆ. ಅದರಲಿದ್ದ ಏಳು ಮೀನುಗಾರರಾದ ಭಟ್ಕಳದ ಸುನಿಲ್, ಮಂಜುನಾಥ, ಸುರೇಶ್ ಮಂಜುನಾಥ್, ಜಗನ್ನಾಥ ರಾಮ, ಪ್ರಶಾಂತ, ಗಜೇಂದ್ರ ಪಾಂಡುರಂಗ, ಕೃಷ್ಣ ಮೊಗೇರ, ಲೋಹಿತ್ ಧರ್ಮ ಇವರನ್ನು ಇನ್ನೊಂದು ಬೋಟ್ ಮೂಲಕ ರಕ್ಷಿಸಲಾಗಿದೆ. ಈ ಅವಘಡದಲ್ಲಿ ಅಂದಾಜು90 ಲಕ್ಷ ರುಪಾಯಿ ನಷ್ಟ ಸಂಭವಿಸಿದ್ದು ಎಂಟು ಸಾವಿರ ಲೀಟರ್ ಡೀಸೆಲ್, ಬಲೆ, ಜಿಪಿಎಸ್, ಹಿಡಿದ ಮೀನುಗಳು ಮುಳುಗಡೆಯಾಗಿದೆ.

Related posts

Leave a Reply

Your email address will not be published. Required fields are marked *