Header Ads
Breaking News

ಮಲ್ಪೆಯ ಹೊಟೇಲಿಗೆ ಬಂದ ಅಪರೂಪದ ಹಾರುವ ಹಾವು

ಪಶ್ಚಿಮ ಘಟ್ಟ ಪ್ರದೇಶದಲ್ಲೇ ಹೆಚ್ಚಾಗಿ ಕಂಡು ಬರುವ ಅಪರೂಪದ ಹಾರುವ ಹಾವು ನಗರ ಪ್ರದೇಶದಲ್ಲಿ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಮಲ್ಪೆ ಪರಿಸರದ ಹೊಟೇಲೊಂದರಲ್ಲಿ ಈ ಅಪರೂಪದ ಹಾವು ಕಂಡುಬಂದಿದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಗೋಲ್ಡನ್ ಟ್ರೀ ಸ್ನೇಕ್ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಕೈಸೋಪೆಲಿಯಾ ಆರ್ನೆಟ. ಮಲ್ಪೆಯ ಹೊಟೇಲಿಗೆ ತರಕಾರಿ ಬುಟ್ಟಿಯ ಮೂಲಕ ಈ ಹಾವು ಬಂದಿರಬೇಕೆಂದು ಶಂಕಿಸಲಾಗಿದೆ. ಹೆಚ್ಚಾಗಿ ಮರದಲ್ಲೇ ಈ ಹಾವು ವಾಸಿಸುತ್ತದೆ. ಮರದಿಂದ ಮರಕ್ಕೆ ಕೆಳಮುಖವಾಗಿ ನೆಗೆಯೋದು ವಿಶೇಷ. ಇದೇ ಮೊದಲಬಾರಿಗೆ ಮಲ್ಪೆ ಪರಿಸರದಲ್ಲಿ ಈ ಹಾವು ಪತ್ತೆಯಾಗಿದೆ. ಮರದಿಂದ ತರಕಾರಿ ವಾಹನಕ್ಕೆ ಹಾರಿ ಮಲ್ಪೆ ತಲುಪಿರುವ ಸಾಧ್ಯತೆಯಿದೆ. ಮೈಮೇಲೆ ಆಕರ್ಷಕ ಪಟ್ಟಿಗಳನ್ನು ಹೊಂದಿರುವ ಈ ಹಾವು ಗರಿಷ್ಟ ಒಂದುವರೆ ಮೀಟರ್ ನಷ್ಟು ಉದ್ದವಿರುತ್ತೆ ಮತ್ತು ವಿಷಕಾರಿಯಲ್ಲ. ಸದ್ಯ ಉರಗತಜ್ಞ ಗುರುರಾಜ್ ಸನಿಲ್ ಅವರು ಈ ಹಾವನ್ನು ಸೆರೆ ಹಿಡಿದಿದ್ದು, ಸುರಕ್ಷಿತ ಸ್ಥಳಕ್ಕೆ ಬಿಡಲಿದ್ದಾರೆ.

Related posts

Leave a Reply

Your email address will not be published. Required fields are marked *