Breaking News

ಮಲ್ಪೆ ಕಲ್ಮಾಡಿಯ ನಡುವೆ ರಸ್ತೆಯಲ್ಲೇ ಕಂದಕ, ಮೃತ್ಯುವಿಗೆ ಆಹ್ವಾನ ನೀಡುತ್ತಿರುವ ಗುಂಡಿ

ಮಲ್ಪೆ ಕಲ್ಮಾಡಿಯ ಕೊರಗಜ್ಜನ ಸ್ಥಾನದ ಸಮೀಪ ರಸ್ತೆಯಲ್ಲಿ ಗುಂಡಿಯೊಂದು ನಿರ್ಮಾಣಗೊಂಡಿದ್ದು, ಮೃತ್ಯುವಿಗೆ ಆಹ್ವಾನ ನೀಡುತ್ತಿದೆ. ಗುಂಡಿಯಲ್ಲಿ ಕಸ ತ್ಯಾಜ್ಯಗಳು ತುಂಬಿ ಕೊಂಡಿದ್ದು, ಸೊಳ್ಳೆಗಳ ಉತ್ಪತಿಗೂ ತಾಣವಾಗಿದೆ.
ಸನಿಹದಲ್ಲಿ ಬಸ್ಸು ತಂಗುದಾಣ ಇದ್ದು ಸಾರ್ವಜನಿಕರು ಶಾಲಾ ಮಕ್ಕಳು ತಿರುಗಾಡುತಿರುತ್ತಾರೆ. ಈ ರಸ್ತೆ ಮಲ್ಪೆ ಬೀಚ್ ಬಂದರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಾದ್ದರಿಂದ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ರಾತ್ರಿ ಹೊತ್ತಿನ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಹಾಗಾಗಿ ಸಮಸ್ಯೆಗೆ ಸಂಬಂಧ ಪಟ್ಟ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.

Related posts

Leave a Reply