Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟ್‌ಗೆ ಬೆಂಕಿ ಮೀನುಗಾರರು ಅಡುಗೆ ಮಾಡುವ ಸಂದರ್ಭ ಘಟನೆ ಲಕ್ಷಾಂತರ ರೂಪಾಯಿ ನಷ್ಟ

 

ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ನಡೆದಿದೆ. ನಿನ್ನೆ ತಡ ರಾತ್ರಿ ಮೀನುಗಾರರರು ಬೋಟ್ ಸಮೀಪ ಅಡುಗೆ ಮಾಡುತಿದ್ದಾಗ ಆಕಸ್ಮಿಕವಾಗಿ ಹಿಮಾಲಯ ಪರ್ಶಿಯನ್ ಹೆಸರಿನ ಬೋಟ್‌ಗೆ ಬೆಂಕಿ ತಗುಲಿದ್ದು ತಕ್ಷಣ ಹತ್ತಿರದಲ್ಲೇ ಇರುವ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ತಕ್ಷಣ ಬೆಂಕಿ ನಂದಿಸಿದ ಕಾರಣ ಅಕ್ಕ ಪಕ್ಕದಲ್ಲಿರುವ ಬೋಟ್‌ಗಳಿಗೆ ಹಾನಿ ಆಗಿಲ್ಲ. ಆದರೆ ಬೆಂಕಿಗೆ ಆಹುತಿಯಾದ ಬೋಟ್‌ಗೆ ಭಾಗಶ: ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply