Header Ads
Header Ads
Breaking News

ಮಲ್ಪೆ ಬೀಚ್‌ನಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಕಲಾಕೃತಿ

ವಿಶ್ವ ಪರಿಸರ ದಿನದ ಪ್ರಯುಕ್ತ ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ವಿಶಿಷ್ಟ ಕಲಾಕೃತಿಯೊಂದನ್ನು ರಚಿಸಲಾಗಿದೆ. ಸಾವಿರಾರು ಜನರು ಭೇಟಿ ನೀಡುವ ಪ್ರವಾಸಿ ತಾಣದಲ್ಲಿ ನಿರ್ಮಿಸಿದ ಕಲಾಕೃತಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಯುವ ಕಲಾವಿದ ಜನಾರ್ದನ ಹಾವಂಜೆ ಅವರು ರಚಿಸಿದ ಈ ವಿಶಿಷ್ಟ ಶಿಲ್ಪ ಪರಿಸರ ದಿನಕ್ಕೆ ಸೂಕ್ತ ಕೊಡುಗೆಯಾಗಿದೆ. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಈ ಸಾಲಿನ ಪರಿಸರ ದಿನದ ಸಂದೇಶವಾಗಿದೆ. ಇದೇ ಹಿನ್ನೆಲೆಯಲ್ಲಿ ಜನಾರ್ದನ್ ಈ ಕಲಾತ್ಮಕ ರಚನೆ ಮಾಡಿದ್ದಾರೆ. ಮಲ್ಪೆ ಬೀಚ್ ನಲ್ಲೇ ಸಂಗ್ರಹಿಸಿದ ಟನ್ ಗಟ್ಟಲೆ ಪ್ಲಾಸ್ಟಿಜ್ ತ್ಯಾಜ್ಯವನ್ನು ಮೀನಿನ ಬಲೆಗೆ ರಾಶಿ ಹಾಕಿ ಕ್ರಿಯಾಶೀಲವಾಗಿ ಕಲಾಕೃತಿ ರೂಪಿಸಲಾಗಿದೆ. ಕಡಲತೀರವನ್ನು ಸ್ವಚ್ಛವಾಗಿಡಿ ಎಂಬ ಸಂದೇಶ ಸಾರಲಾಗುತ್ತಿದೆ.

Related posts

Leave a Reply