Header Ads
Header Ads
Breaking News

ಮಲ್ಪೆ ಬೋಟ್ ನಾಪತ್ತೆ ಪ್ರಕರಣ: ಮಹಾರಾಷ್ಟ್ರದ ಕಡಲ ತೀರದಲ್ಲಿ ಬೋಟಿನ ಅವಶೇಷ ಪತ್ತೆ?

ಮಹಾರಾಷ್ಟ್ರದ ರತ್ನಗಿರಿ ಬಳಿಯಲ್ಲಿ ಬೋಟಿನ ಅವಶೇಷಗಳು ಕಂಡು ಬಂದಿದ್ದು, ಮಲ್ಪೆಯಿಂದ ಕಾಣೆಯಾದ ಸುವರ್ಣ ತ್ರಿಭುಜ ಬೋಟಿನದ್ದೇ ಎನ್ನಲಾಗುತ್ತಿದೆ.ಅಂಕೋಲಾ ತಾಲೂಕಿನ ಬೇಲೆಕೇರಿ ಮೂಲದ ಮೀನುಗಾರರಿಗೆ ಈ ಬೋಟಿನ ಅವಶೇಷಗಳು ಕಂಡು ಬಂದಿದೆ. ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ಬೋಟಿನ ಭಾಗಗಳನ್ನು ಮೀನುಗಾರರು ಗಮನಿಸಿದ್ದು, ಕರಾವಳಿ ಕಾವಲು ಪಡೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಮೀನುಗಾರನಿಂದ ಸಂಪೂರ್ಣ ಮಾಹಿತಿ ಪಡೆದಿರುವ ರಾಜ್ಯದ ಕರಾವಳಿ ಕಾವಲು ಪಡೆ ಪೊಲೀಸರು, ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಿದ್ದಾರೆ. ಡಿಸೆಂಬರ್13 ರಂದು ಮಲ್ಪೆಯಿಂದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿತ್ತು. ಬೋಟಿನಲ್ಲಿದ್ದ ರಾಜ್ಯದ 7 ಮೀನುಗಾರರು ಈ ವೇಳೆ ನಾಪತ್ತೆಯಾಗಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಕೂಡ ಮೀನುಗಾರರಾಗಲಿ ಬೋಟ್ ಆಗಲಿ ಪತ್ತೆಯಾಗಿರಲಿಲ್ಲ.

Related posts

Leave a Reply