Header Ads
Header Ads
Breaking News

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ : ಸರಕಾರ ಮಟ್ಟದಲ್ಲಿ ಎಲ್ಲಾ ಪ್ರಯತ್ನ ನಡೆಸಲಾಗಿದೆ ಉಡುಪಿಯಲ್ಲಿ ಸಚಿವೆ ಜಯಮಾಲಾ ಹೇಳಿಕೆ

ಉಡುಪಿಯ ಮಲ್ಪೆಯಿಂದ ನಾಪತ್ತೆಯಾಗಿರುವ ಏಳು ಮೀನುಗಾರರು ವಾಪಾಸ್ ಬರುತ್ತಾರೆ ಎಂಬ ನಂಬಿಕೆ ಇದೆ. ಅವರನ್ನು ಅಪಹರಿಸಿ ಒತ್ತೆ ಇಟ್ಟಿರುವ ಬಗ್ಗೆಯೂ ನಮಗೆ ಗುಮಾನಿ ಇದೆ. ಸರಕಾರದ ಮಟ್ಟದಲ್ಲಿ ಎಲ್ಲಾ ಶೋಧಕಾರ್ಯ ಮಾಡಿದ್ದೇವೆ ಎಂದು ಉಡುಪಿ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಮೀನುಗಾರರು ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಎಂಬ ನಂಬಿಕೆಯಿದೆ. ಅಪಹರಿಸಿ ಒತ್ತೆ ಇಟ್ಟಿರುವ ಬಗ್ಗೆಯೂ ನಮಗೆ ಗುಮಾನಿ ಇದೆ. ಈ ಹಿಂದೆಯೂ ಒತ್ತೆ ಇಟ್ಟಿರುವ ಘಟನೆ ನಡೆದಿದೆ.ಕೇಂದ್ರ- ರಾಜ್ಯ ಸರ್ಕಾರ ಮೀನುಗಾರರ ಕುಟುಂಬದ ಜೊತೆಗಿದೆ. ನೌಕಾಸೇನೆ, ವಾಯುಸೇನೆ ಅಧಿಕಾರಿಗಳು ಹುಡುಕಾಟ ಮಾಡಿದ್ದಾರೆ. ಕೊಸ್ಟ್‌ಗಾರ್ಡ್ ಇಲಾಖೆ ಕೂಡಾ ಕಾರ್ಯಾಚರಣೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಮೀನುಗಾರರು ನಾಳಿನ ಪ್ರತಿಭಟನೆ ಕೈಬಿಡಲಿ ಎಂದು ಮನವಿ ಮಾಡಿದ ಸಚಿವೆ ಜಯಮಾಲಾ ಅವರು, ಮೀನುಗಾರರ ನೋವು ನಮ್ಮ ನೋವೆಂದು ಭಾವಿಸಿದ್ದೇವೆ. ಗೃಹಸಚಿವರು ಇಂದು ಉಡುಪಿಗೆ ಬಂದು ಸಭೆ ನಡೆಸುತ್ತಾರೆ.ಮೀನುಗಾರಿಕಾ ಸಚಿವರೂ ಉಡುಪಿಗೆ ಬರುತ್ತಾರೆ ಎಂದು ಹೇಳಿದರು. ಭಯೋತ್ಪಾದಕ ಕೃತ್ಯ ಆಗಿದ್ದರೂ ಬಿಡಿಸಿಕೊಂಡು ತರುತ್ತೇವೆ. ಮೀನುಗಾರರು ಜೀವಂತ ಬಂದರೆ ಸಾಕು. ನಾನೂ ಕೂಡ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

Related posts

Leave a Reply