Header Ads
Header Ads
Breaking News

ಮಲ್ಲಾರಿಯ ಗ್ರಾಮಸ್ಥರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಭಟ್ಕಳ ತಹಶೀಲ್ದಾರ್ ವಿ.ಎನ್. ಬಾಡಕರ್‌ಗೆ ಗ್ರಾಮಸ್ಥರಿಂದ ಮನವಿ

ಮೋಡರ್ನ ರೋಡ್ಸ ಮೇಕರ್‍ಸ ಪ್ರೈ.ಲಿ. ಕಂಪನಿಯೂ ಭಟ್ಕಳ ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಾರಿಯ ಗ್ರಾಮಸ್ಥರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದ್ದು, ಪರಿಹಾರ ಸಿಗಬೇಕಾದ ಫಲಾನುಭವುಗಳಿಗೆ ಬಿಟ್ಟು ಪ್ರಭಾವಿ ಜನರಿಗೆ ನೀಡಿದ್ದಾರೆಂದು ಆಗ್ರಹಿಸಿ ಭಟ್ಕಳ ತಹಸೀಲ್ದಾರ್ ವಿ.ಎನ್.ಬಾಡಕರ್ ಅವರಿಗೆ ಭಟ್ಕಳ ಬಿಜೆಪಿ ಮಂಡಲ ಹಾಗೂ ಮಲ್ಲಾರಿ ಗ್ರಾಮಸ್ಥರಿಂದ ಮನವಿಯನ್ನು ಸಲ್ಲಿಸಲಾಯಿತು.

ಮನವಿಯಲ್ಲಿ ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಾರಿಯಲ್ಲಿ ಕಲ್ಲಿನ ಕ್ವಾರಿ ಮತ್ತು ಕ್ರಶರ್ ಘಟಕವನ್ನು ನಡೆಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರ ಜಮೀನಿಗೆ, ವಸತಿಗೆ ಹಾಗೂ ಕೃಷಿ ಭೂಮಿಗಳಿಗೆ ಅಪಾರ ಹಾನಿಯಾಗಿದೆ. ಅದಕ್ಕಾಗಿ ಕೆಲವು ದಿನಗಳ ಹಿಂದೆ ಪರಿಹಾರಕ್ಕಾಗಿ ಹೋರಾಟ ಮಾಡಿದ್ದು, ಇದಾದ ನಂತರ ಪರಿಹಾರ ನೀಡುತ್ತೆವೆಂದು ಭರವಸೆ ನೀಡಿ ಸ್ಥಳದ ಸರ್ವೇ ಕಾರ್ಯವನ್ನು ಮಾಡಿ ಪರಿಹಾರವನ್ನು ನೀಡಲಾಯಿತು. ಆದರೆ ನೀಡಿದ ಪರಿಹಾರವದಲ್ಲಿ ಸಾಕಷ್ಟು ತಾರತಮ್ಯ ವೆಸಗಿದ ಕಂಪನಿಯು ನಿಜವಾಗಿ ಪರಿಹಾರ ಸಿಗಬೇಕಾದ ಜನರಿಗೆ ನೀಡದೇ ಕೆಲವು ಪ್ರಭಾವಿ ಜನರಿಗೆ ಮಾತ್ರ ಕಡಿಮೆ ಭೂಮಿ ಇದ್ದರು ಸಹ ಅತೀ ಹೆಚ್ಚಿನ ಪರಿಹಾರವನ್ನು ನೀಡಿದ್ದಾರೆ.

ಇದೇ ಸಂಧರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಜೆ.ಡಿ.ನಾಯ್ಕ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, “ ಬೆಂಗ್ರೆ ಮಲ್ಲಾರಿಯಲ್ಲಿನ ಕಲ್ಲನ ಕ್ವಾರಿ ಹಾಗೂ ಕ್ರಶರ್‌ನಿಂದ ಇಲ್ಲಿನ ನಿವಾಸಿಗಳಿಗೆ ತೀರಾ ತೊಂದರೆಯಾಗುತ್ತಿದ್ದು, ತೊಂದರೆಗೊಳಗಾದ ಜನರಿಗೆ ಪರಿಹಾರದ ಚೆಕ್ ವಿತರಿಸುವ ಬದಲು ಸಮಸ್ಯೆಯನ್ನೇ ಅನುಭವಿಸದವರಿಗೆ, ಅದರಲ್ಲು ಕಲ್ಲಿನ ಕ್ವಾರಿ ಹಾಗೂ ಕ್ರಶರ್ ಇರುವ ೫೦೦ ಮೀ. ಹೊರಗಡೆಯ ಪ್ರಭಾರಿ ಜನರಿಗೆ ಶಾಸಕರ ಇಷ್ಟದಂತೆ ಪರಿಹಾವನ್ನು ನೀಡಿದ್ದಾರೆ. ಹಾಗಾದರೆ ಕಲ್ಲಿನ ಕ್ವಾರಿ ಹಾಗೂ ಕ್ರಶರ್ ಹತ್ತಿರ ವಾಸವಿದ್ದ ಜನರು ಹೆಚ್ಚಿನ ಪರಿಹಾರದ ಪಡೆದುಕೊಳ್ಳುವ ಹಕ್ಕಿಲ್ಲವೇ? ಎಂದು ಹೇಳಿದರು.

ವರದಿ:ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply