
ಎಸ್.ವೈ.ಎಸ್ ಉದ್ದಬೆಟ್ಟು ಬ್ರಾಂಚ್ ಇದರ ಆಶ್ರಯದಲ್ಲಿ ಎಪ್ರಿಲ್ 9ರಂದು ಮಗ್ರಿಬ್ ಬಳಿಕ ಬೃಹತ್ ಸುನ್ನೀ ಮಹಾಸಂಗಮ ಮಲ್ಲೂರು ಬದ್ರೀಯಾ ನಗರದಲ್ಲಿ ನಡೆಯಲಿದೆ ಎಂದು ಸುನ್ನೀ ಮಹಾಸಂಗಮದ ಸಲಹೆಗಾರರಾದ ಎಂ.ಪಿ.ಎಂ. ಆಶ್ರಫ್ ಸಅದಿ ಹೇಳಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಸ್ಸಯ್ಯದ್ ನಿಝಾಮುದ್ದೀನ್ ಬಾಫಖಿ ತಂಙಲ್ ಮಲ್ಲೂರು, ಸಂಗಮವನ್ನು ಉದ್ಘಾಟಿಸಲಿದ್ದು, ಮುಹಮ್ಮದ್ ಆಲೀಂ ಮದಿನಿ ದುವಾ ನೆರವೇರಿಸುವರು. ಆದ್ಯಾತ್ಮಿಕ ನೇತಾರರು, ಸಾವಿರಾರು ಜನರ ಆಶಾ ಕೇಂದ್ರವಾದ ಅಸ್ಸಯ್ಯದ್ ಅಬ್ದಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಲ್ ಬಾಯಾರ್ ತಂಙಲ್ ದುವಾ ಆಶೀರ್ವಚನ ನಡೆಸಲಿದ್ದಾರೆ. ಖ್ಯಾತ ವಾಗ್ಮಿ ಅಲ್ ಹಾಫಿಲ್ ಮಸೂದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದ ಅವರು, ಮುಖ್ಯ ಅತಿಥಿಗಳಾಗಿ ಎಸ್ವೈಎಸ್ ಅಧ್ಯಕ್ಷರಾದ ಅಬ್ದುಲ್ ಮಜಿದ್ ಸಖಾಫಿ, ಎಸ್ಎಸ್ಎಫ್ ಅಮ್ಮುಂಜೆ ಸೆಟ್ಟರ್ನ ಸೈಫುಲ್ಲಾ ಸಖಾಫಿ ಬಡಕಬೈಲ್, ಅಬ್ದುಲ್ ಖಾದರ್ ಮುನವ್ವರಿ, ಖತೀಬರಾದ ಸಲೀಂ ಅರ್ಶಧಿ, ಮೊದಲಾದವರು ಭಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸುನ್ನೀ ಮಹಾಸಂಗಮದ ಚೇರ್ಮೆನ್ ನೌಫಲ್ ಎಂ.ಯು., ಸಲಹೆಗಾರರಾದ ಎಂ.ಜಿ. ಇಕ್ಬಾಲ್, ಕೋಶಾಧಿಕಾರಿ ಅಶ್ರಫ್ ಬದ್ರಿಯಾನಗರ, ಉದ್ದಬೆಟ್ಟು ಬ್ರಾಂಚ್ನ ಅಧ್ಯಕ್ಷರಾದ ಎಂ.ಎ. ಮುಹಮ್ಮದ್ ಉಪಸ್ಥಿತರಿದ್ದರು.