Header Ads
Breaking News

ಮಳೆಗಾಗಿ ಕದ್ರಿ ದೇವಸ್ಥಾನದಲ್ಲಿ ಸಾಮೂಹಿಕ ವರುಣಮಂತ್ರ ಪಠಣ

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಬವಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಳೆಗಾಗಿ ಜನತೆ ದೇವರ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಡಿವೈನ್ ಪಾರ್ಕ್ ಟ್ರಸ್ಟ್‌ನ ವಿವೇಕ ಜಾಗೃತ ಬಳಗ ವತಿಯಿಂದ ಕದ್ರಿ ದೇವಸ್ಥಾನದ ವಠಾರದಲ್ಲಿ ಮಳೆಗಾಗಿ ವಿಶೇಷ ಸಾಮೂಹಿಕ ವರುಣಮಂತ್ರ ಪಠಣ ನಡೆಯಿತು.

 

ಸ್ವಾಮಿ ವಿವೇಕಾನಂದರ ದಿವ್ಯ ಮಾರ್ಗದರ್ಶನದಂತೆ ಮಳೆಗಾಗಿ ವಿಶೇಷ ಪ್ರಾರ್ಥನೆ ಹಾಗೂ ವರುಣಮಂತ್ರ ಪಠಣ ಜರುಗಿದ್ದು, ಈ ವೇಳೆ ನೂರಕ್ಕೂ ಅಧಿಕ ಮಂದಿ ವರುಣಮಂತ್ರ ಪಠಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ವೇಳೆ ಮಂಗಳೂರು ಡಿವೈನ್ ಪಾರ್ಕ್ ಟ್ರಸ್ಟ್‌ನ ಸಂಪನ್ಮೂಲ ವ್ಯಕ್ತಿ ಪದ್ಮಲತಾ ರಾಜ್, ಡಿವೈನ್ ಪಾರ್ಕ್ ಟ್ರಸ್ಟ್‌ನ ಅಧಿಕಾರಿ ರತ್ನ ಎಸ್.ಉಡುಪ, ಮಂಗಳೂರು ವಿವೇಕ ಜಾಗೃತ ಬಳದ ಪೂರ್ವ ಅಧ್ಯಕ್ಷ ಮಾಧವ ನಾರಾಯಣ್, ಮಂಗಳೂರು ವಿವೇಕ ಜಾಗೃತ ಬಳದ ಪಶ್ಚಿಮ ಅಧ್ಯಕ್ಷೆ ಭಾರತೀ ಭಟ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *