Header Ads
Breaking News

ಮಳೆಗಾಗಿ ದೇವರ ಮೊರೆ ಹೋದ ಉಡುಪಿ ನಾಗರಿಕರು: ಮಾಡಿದ್ದೇನು ಗೊತ್ತೇ?

ಕರಾವಳಿಯಾದ್ಯಂತ ನೀರಿನ ಸಮಸ್ಯೆ ಎದುರಾಗಿದೆ. ಜನರು ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎಲ್ಲೆಡೆ ಬಂದೊದಗಿದೆ. ಉಡುಪಿಯಲ್ಲೂ ಕಳೆದ ಒಂದು ವಾರದಿಂದ ನೀರಿನ ಸಮಸ್ಯೆ ಎದುರಾಗಿದ್ದು, ನಾಗರಿಕರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಉಡುಪಿ ಶಾಸಕರಾದ ರಘುಪತಿ ಭಟ್ ಅವರ ನೇತೃತ್ವದಲ್ಲಿ ಕೃಷ ಮಠ, ಅನಂತೇಶ್ವರ, ಚಂದ್ರಮೌಳೀಶ್ವರ ಹಾಗೂ ಮುಖ್ಯಪ್ರಾಣ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಜಪ ಮಾಡಲಾಯಿತು. ಈ ಸಂದರ್ಭ ಪಲಿಮಾರು ಹಾಗೂ ಅದಮಾರು ಮಠಾಧೀಶರು ಭಾಗಿಯಾಗಿದ್ರು. ಒಟ್ಟಿನಲ್ಲಿ ಎಲ್ಲೆಡೆ ನೀರಿನ ಸಮಸ್ಯೆ ಎದುರಾಗಿದ್ದು ಜನ ನೀರಿಗಾಗಿ ಹಾಹಾಕಾರ ಪಡುವಂತಹ ಪರಿಸ್ಥಿತಿ ಎದುರಾಗಿದೆ.

Related posts

Leave a Reply

Your email address will not be published. Required fields are marked *