Breaking News

ಮಳೆಗಾಗಿ ಮುಸಲ್ಮಾನರಿಂದ ಮಸೀದಿಯಲ್ಲಿ ನಮಾಜ್, ಉಡುಪಿ ನಾಯರ್ ಕೆರೆ ಹಾಶಿಮಿ ಮಸೀದಿಯಲ್ಲಿ ಪ್ರಾರ್ಥನೆ


ಮಾಡಿರುವ ತಪ್ಪನ್ನು ಮನ್ನಿಸಿ ಮಳೆ ಕರುಣಿಸುವಂತೆ ಮುಸಲ್ಮಾನ ಬಾಂಧವರು ಒಂದಾಗಿ ಉಡುಪಿ ಬ್ರಹ್ಮಗಿರಿ ನಾಯರ್ ಕೆರೆಯ ಹಾಶಿಮಿ ಮಸೀದಿಯಲ್ಲಿ ನಮಾಜ್ ಮಾಡುವ ಮೂಲಕ ಪ್ರಾರ್ಥಿಸಿದರು.
ಮನುಷ್ಯರಲ್ಲದೆ ಪ್ರಾಣಿ, ಪಕ್ಷಿ, ಗಿಡ ಮರಗಳಿಗೆ ನೀರಿನ ಅಗತ್ಯವಿರುವುದರಿಂದ ಮನುಷ್ಯರಾದ ನಮ್ಮೆಲ್ಲರ ತಪ್ಪನ್ನು ಮನ್ನಿಸಿ ಮಳೆ ಕರುಣಿಸುವಂತೆ ನಮಾಜ್ ಮಾಡುವ ಮೂಲಕ ಪ್ರಾರ್ಥಿಸಲಾಯಿತು. ಈ ಸಂಧರ್ಭದಲ್ಲಿ ಧರ್ಮಗುರು ಹಾಶಿಮ್ ಮುಂಗ್ರಿ ಮಾತನಾಡಿ, ನಮ್ಮಿಂದ ತಪ್ಪಾಗಿರುವುದರಿಂದಲೇ ಅಲ್ಲಾ ಮಳೆಯನ್ನು ಹಿಡಿದಿಟ್ಟಿದ್ದಾನೆ ಈ ಹಿನ್ನಲೆಯಲ್ಲಿ ತಪ್ಪನ್ನು ಕ್ಷಮಿಸಿ ಮಳೆ ಕರುಣಿಸುವಂತೆ ಪ್ರಾರ್ಥಿಸಿದ್ದೇವೆ ಎಂದರು.
ಇನ್ನು ನಮ್ಮೊಂದಿಗೆ ಮುಸಲ್ಮಾನ ಭಕ್ತ ರಿಯಾಜ್ ಆಲಿ ಮಾತನಾಡಿ, ನೀರಿನ ಕೊರತೆ ಹೆಚ್ಚಿರುವ ಕಾರಣ ಅಲ್ಲಾನಲ್ಲಿ ಮಳೆ ಕರುಣಿಸುವಂತೆ ನಮಾಜ್ ಮೂಲಕ ಪ್ರಾರ್ಥಿಸಲಾಗಿದೆ ಎಂದರು.

Related posts

Leave a Reply