Header Ads
Header Ads
Header Ads
Breaking News

ಮಳೆಗೆ ತತ್ತರಿಸಿದ ರಾಜ್ಯ ರಾಜಧಾನಿ ಗಾಳಿ ಮಳೆಗೆ ಒಂದೇ ಕುಟುಂಬದ ಮೂವರು ಬಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

 

ಬೆಂಗಳೂರು ನಗರದಲ್ಲಿ ಶುಕ್ರವಾರ ರಾತ್ರಿ ಗಾಳಿಸಹಿತ ಭಾರೀ ಮಳೆಗೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದು, ಮತ್ತೋರ್ವ ರೈಲ್ವೆ ಅಂಡರ್‌ಪಾಸ್‌ನ ಮೋರಿಯಲ್ಲಿ ಕೊಚ್ಚಿಹೋಗಿದ್ದಾನೆ. ಯುವಕನ ಪತ್ತೆಗೆ ಶೋಧ ಕಾರ್ಯ ನಡೆದಿದೆ. ಈ ಮೂಲಕ ಕಳೆದ ಐದು ತಿಂಗಳಲ್ಲಿ ಮಳೆಗೆ ನಗರದ ಆರು ಜನ ಬಲಿಯಾದಂತಾಗಿದೆ.

ಕಳೆದ ತಿಂಗಳು ಆಗಸ್ಟ್‌ನಲ್ಲಿ ೧೫ ರಂದು ಸುರಿದ ದಾಖಲೆಯ ಮಳೆಗೆ ಬೆಂಗಳೂರು ತತ್ತರಿಸಿತ್ತು. ಆ ಮಹಾ ಮಳೆಯನ್ನು ನೆನಪಿಸುವಂತೆ ಇಂದು ಬೆಂಗಳೂರಿನಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಲಸೂರು, ಜೆ.ಪಿ.ನಗರ, ಕೋರಮಂಗಲ ೮೦ ಅಡಿ ರಸ್ತೆ ಒಳಗೊಂಡಂತೆ ಹತ್ತಾರು ಪ್ರಮುಖ ರಸ್ತೆಗಳು ಜಲಾವೃತಗೊಂಡವು. ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿದ ಬಗ್ಗೆಯೂ ವರದಿಯಾಗಿದೆ. ಸುಮಾರು ಒಂದು ತಾಸು ಮಳೆ ಸುರಿದಿದ್ದು, ಕೆ‌ಎಸ್‌ಎನ್‌ಡಿ‌ಎಂಸಿ ಪ್ರಕಾರ ಗರಿಷ್ಠ ೭೯.೫ ಮಿ.ಮೀ. ದಾಖಲಾಗಿದೆ. ರಸ್ತೆಯಲ್ಲಿ ೨-೩ ಅಡಿಗಳಷ್ಟು ನೀರು ಹರಿಯುತ್ತಿದ್ದುದರಿಂದ ಗುಂಡಿಗಳಾವು ಮತ್ತು ರಸ್ತೆ ಯಾವುದು ಎಂಬುದೇ ಗೊತ್ತಾಗುತ್ತಿರಲಿಲ್ಲ. ಇದರಿಂದ ವಾಹನ ಸವಾರರು ಪರದಾಡಿದರು. ಕೆಲವೆಡೆ ಆಯತಪ್ಪಿ ರಸ್ತೆ ಗುಂಡಿಗಳಲ್ಲಿ ಬಿದ್ದು, ಬಿಬಿ‌ಎಂಪಿಗೆ ಹಿಡಿಶಾಪ ಹಾಕಿದರು. ಮಧ್ಯಾಹ್ನ ಸುರಿದ ವಿರಾಮ ನೀಡಿದ್ದ ಮಳೆ, ರಾತ್ರಿ ಮತ್ತೆ ಧಾರಾಕಾರವಾಗಿ ಸುರಿಯಿತು. ಕಿ.ಮೀ. ಗಟ್ಟಲೆ ವಾಹನಗಳು ನಿಂತಿದ್ದವು. ಬೈಕ್ ಸವಾರರು ತೊಯ್ದುತೊಪ್ಪೆಯಾದರು.

Related posts

Leave a Reply