Header Ads
Breaking News

ಮಳೆಯಲ್ಲಿ ಕುಗ್ಗದ ಸ್ವಾತಂತ್ರ್ಯ ಸಂಭ್ರಮ : ಉಡುಪಿಯಲ್ಲಿ ಮಳೆಯಲ್ಲೇ ಪಥ ಸಂಚಲನ, ಧ್ವಜಾರೋಹಣ

ಮಳೆ ಸುರಿಯುತ್ತಿದ್ದರೂ ಕುಗ್ಗಲಿಲ್ಲ ಸ್ವಾತಂತ್ರೋತ್ಸವದ ಸಂಭ್ರಮ. ಹೌದು ಇಂದು ಉಡುಪಿಯಲ್ಲಿ ನಡೆದ ಸಾತಂತ್ರೋತ್ಸವದ ದೃಶ್ಯವಿದು. ಉಡುಪಿ ಜಿಲ್ಲಾಡಳಿತದ ವತಿಯಿಂದ 73ನೇ ಸ್ವಾತಂತ್ರೋತ್ಸವ ಬೀಡಿನಗುಡ್ಡೆಯ ಬಯಲು ರಂಗ ಮಂದಿರದ ಮಹತ್ಮಾ ಗಾಂಧಿ ಮೈದಾನದಲ್ಲಿ ನಡೆಯಿತು. ಬೆಳಗ್ಗೆಯಿಂದಲೇ ಉಡುಪಿಯಲ್ಲಿ ಮಳೆ ಸುರಿಯುತ್ತಿತ್ತು.ಆದ್ರೆ ಇದು ಸ್ವಾತಂತ್ರೋತ್ಸವದ ಉತ್ಸಾಹಕ್ಕೆ ಕುಂದು ತರಲಿಲ್ಲ. ಮೊದಲಿಗೆ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ದ್ವಜಾರೋಹಣ ನೆರವೇರಿಸಿದರು. ಬಳಿಕ ಪಥ ಸಂಚಲನ ನಡೆಸುವ ಸಂದರ್ಬದಲ್ಲಿ ಮಳೆ ಸುರಿಯುತ್ತಿತ್ತು.

ಇದನ್ನ ಲೆಕ್ಕಿಸದೇ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ, ಗೃಹರಕ್ಷಕ ದಳ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಕರಾವಳಿ ಕಾವಲು ನಿಯಂತ್ರಣ ಪಡೆ, ಎನ್.ಸಿ.ಸಿ. ಸ್ಕೌಟ್ಸ್ , ಗೈಡ್ಸ್ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಸಿದ್ದು ಗಮನ ಸೆಳೆಯಿತು. ಜಿಲ್ಲಾಧಿಕಾರಿಗಳು ಗೌರವ ವಂದನೆಯನ್ನು ಸಹ ಮಳೆಯಲ್ಲೇ ನೀಡಿದರು. ಸ್ವಾತಂತ್ರೋತ್ಸವದ ಸಂದೇಶ ನೀಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಯ ಹಿನ್ನಲೆಯಲ್ಲಿ ಈಗಾಗಲೇ ಪರಿಹಾರವನ್ನು ಒದಗಿಸಲಾಗಿದ್ದು ಸರಕಾರ 5 ಕೋಟಿಯ ಅನುದಾನವನ್ನು ನೀಡಿದೆ ಎಂದರು. ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭಾರೀ ಮಳೆಯಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

 

Related posts

Leave a Reply

Your email address will not be published. Required fields are marked *