Header Ads
Header Ads
Breaking News

ಮಳೆಯಿಂದಾಗಿ ಹದಗೆಟ್ಟ ಓಟೆಪಡ್ಪು ಮಣ್ಣಿನ ರಸ್ತೆ : ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಗ್ರಾ.ಪಂ. ಅಧ್ಯಕ್ಷರು

ವಿಟ್ಲ: ಮಳೆಯಿಂದ ನಿರಂತರವಾಗಿ ಹದಗೆಟ್ಟು ಹೋಗಿರುವ ರಸ್ತೆಯನ್ನು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಮಾಣಿಲ ಗ್ರಾ.ಪಂ ಅಧ್ಯಕ್ಷರೇ ಹಾರೆ ಹಿಡಿದು ರಸ್ತೆ ದುರಸ್ತಿ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟಿದ್ದಾರೆ.

 

 

ಮಾಣಿಲ ಗ್ರಾಮದ ಓಟೆಪಡ್ಪು ಮಣ್ಣಿನ ರಸ್ತೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹದಗೆಟ್ಟು ಹೋಗಿತ್ತು. ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿತ್ತು. ವಾಹನಗಳು ರಸ್ತೆಯಲ್ಲಿಯೇ ಹೂತು ಹೋಗಿತ್ತು. ವಾಹನ ಬಿಡಿ ಜನರಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಜನಪ್ರತಿನಿಧಿ ಗಮನಕ್ಕೆ ತಂದರೂ ಅನುದಾನದ ಕೊರತೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದರು. ಈ ರಸ್ತೆಗೆ ಗ್ರಾಮ ಪಂಚಾಯಿತಿ ಅನುದಾನ ಸಾಕಾಗದ ಹಿನ್ನೆಲೆಯಲ್ಲಿ ಅದು ಹಾಗೇ ಉಳಿದಿತ್ತು. ಓಟೆಪಡ್ಪು ಭಾಗದ ಗ್ರಾಮಸ್ಥರು ಗ್ರಾ.ಪಂ ಗೆ ಮತ್ತೆ ಮತ್ತೆ ಒತ್ತಡ ಹಾಕಿದ್ದರು. ಈ ಬಗ್ಗೆ ಎಚ್ಚೆತ್ತ ಗ್ರಾ.ಪಂ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಅವರು ಗುತ್ತಿಗೆದಾರರ ಮುಖಾಂತರ ತಾತ್ಕಾಲಿಕವಾಗಿ ರಸ್ತೆಗೆ ಜಿಲ್ಲಿ ಹಾಕಲು ಮುಂದಾಗಿದ್ದಾರೆ. ಗುತ್ತಿಗೆದಾರರ ಜತೆಯಲ್ಲಿ ಕೆಲಸಕ್ಕೆ ಇಳಿದ ಅಧ್ಯಕ್ಷರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *