Header Ads
Header Ads
Breaking News

ಮಳೆ ಪ್ರಮಾಣ ಕಡಿಮೆ ಹಿನ್ನೆಲೆ ನಿರುತ್ಸಾಹದಿಂದ ಸಮುದ್ರಕ್ಕಿಳಿದ ಮೀನುಗಾರರು ಹಂಗಾರಕಟ್ಟೆಯಲ್ಲಿ ಯಾಂತ್ರಿಕೃತ ಮೀನುಗಾರಿಕೆಗೆ ಚಾಲನೆ

 

ಕುಂದಾಪುರ: ಐತಿಹಾಸಿಕ ಹಂಗಾರಕಟ್ಟೆ ಬಂದರಿನಿಂದ ಬುಧವಾರ ಯಾಂತ್ರಿಕೃತ ಮೀನುಗಾರಿಕೆಗೆ ಚಾಲನೆ ದೊರಕಿತು. ಆದರೆ ಈ ಬಾರಿ ಮೀನುಗಾರಿಕೆ ತೆರಳಲು ಮೀನುಗಾರರ ಉತ್ಸಾಹದ ಕೊರತೆ ಕಾಣುತ್ತಿತ್ತು. ಪ್ರತಿವರ್ಷ ಮೀನುಗಾರಿಕೆ ಆರಂಭದಂದು ಗಿಜಿಗುಡುತ್ತಿದ್ದ ಬಂದರಿನಲ್ಲಿ ಹಬ್ಬದ ವಾತಾವರಣವಿತ್ತು. ಆದರೆ ಈ ಬಾರಿ ಮಾತ್ರ ಬೋಟು ಕಾರ್ಮಿಕರು ಮತ್ತು ಮಾಲೀಕರಲ್ಲಿ ನಿರುತ್ಸಾಹ ಕಾಣುತ್ತಿತ್ತು.
ಹಂಗಾರಕಟ್ಟೆ ಮೀನುಗಾರಿಕಾ ಬಂದರಿನಲ್ಲಿ ಮತ್ತು ಕೋಡಿ ಬೆಂಗ್ರೆ ಜೆಟ್ಟಿಯಲ್ಲಿ ಸುಮಾರು ೩೦೦ಕ್ಕೂ ಅಧಿಕ ಬೋಟುಗಳು ಕಾರ್‍ಯಾಚರಿಸುತ್ತದೆ. ಈ ಬಾರಿ ಮಳೆಗಾಲದಲ್ಲಿ ಮಳೆಯ ಪ್ರಮಾಣ ಕುಂಠಿತಗೊಂಡ ಹಿನ್ನೆಲೆ ಈ ಬಾರಿ ಮೀನುಗಾರಿಕಾ ಇಳುವರಿಯ ಬಗ್ಗೆ ಮೀನುಗಾರರು ಆತಂಕಿತರಾಗಿದ್ದಾರೆ. ಸಾಲ ಸೋಲ ಮಾಡಿ ಬೋಟು ಹಾಕಿಕೊಂಡವರು ಮೀನು ಸಿಕ್ಕರೆ ಸಾಕೆಂಬ ಆಶಾಭಾವನೆಯಲ್ಲಿ ಸಮುದ್ರಕ್ಕಿಳಿಯುತ್ತಿದ್ದಾರೆ. ಕಳೆದ ವರ್ಷ ಮಳೆ ಕುಸಿತ ಹಿನ್ನೆಲೆ ಮೀನಿನ ಇಳುವರಿ ಸಾಕಷ್ಟು ಕುಸಿದಿತ್ತು. ಇದರಿಂದ ಬೋಟು ಮಾಲೀಕರು ಸಾಕಷ್ಟು ನಷ್ಟ ಅನುಭವಿಸಿದ್ದರು.


ಬುಲ್‌ಟ್ರೋಲ್ ಬಳಸಲು ಅನುಮತಿ ಇಲ್ಲ
ಅಗಸ್ಟ್ ಅಂತ್ಯದವರೆಗೆ ಮೀನುಗಾರರಿಗೆ ಬುಲ್‌ಟ್ರೋಲ್ ಬಳಸಲು ಅನುಮತಿ ಇಲ್ಲ. ಮೀನು ಮರಿಗಳಿಗೆ ಹಾನಿಯಾಗುವುದೆಂಬ ಆತಂಕದಿಂದ ಬುಲ್‌ಟ್ರೊಲ್ ಬಳಕೆಗೆ ಇಲಾಖೆಯಿಂದ ಆಕ್ಷೇಪ ಬಂದಿತ್ತು. ಆದರೆ ಬುಲ್‌ಟ್ರೋಲ್‌ನಿಂದ ಸಾಕಷ್ಟು ಮತ್ಸ ಸಂಪತ್ತು ಸಿಗುವುದರಿಂದ ಮತ್ತು ಆಗಸ್ಟ್ ಆರಂಭದಲ್ಲಿ ಮೀನುಗಳು ಮೇಲೆ ಇರುವುದರಿಂದ ಬುಲ್‌ಟ್ರೋಲ್ ಬಳಕೆಯಿಂದ ಬೋಟು ಮಾಲೀಕರಿಗೆ ಸ್ವಲ್ಪ ಲಾಭವಾಗುತ್ತಿತ್ತು. ಸೆಪ್ಟೆಂಬರ್ ಮೊದಲವಾರದಿಂದ ಬುಲ್‌ಟ್ರೋಲ್ ಬಳಕೆಗೆ ಅನುಮತಿ ಇರುವುದರಿಂದ ಈ ಒಂದು ತಿಂಗಳು ಬೋಟಿನ ಡಿಸೇಲ್ ಹಣ ಕೂಡ ಸಿಗುವುದು ಕಷ್ಟವೆನ್ನುತ್ತಾರೆ ಪರ್ಷಿನ್ ಬೋಟು ಮಾಲೀಕರು
ಅಳಿವೆ ಸಮಸ್ಯೆ
ಹಂಗಾರಕಟ್ಟೆ ಬಂದರಿನ ಅಳಿವೆಯಲ್ಲಿ ಹೂಳು ತುಂಬಿಕೊಂಡಿದ್ದು, ಬೋಟುಗಳು ಉಬ್ಬರ ಬಾರದೆ ನೀರಿಗಿಳಿಯುವಂತಿಲ್ಲ ಅಂತಹ ಪರಿಸ್ಥಿತಿ ಎದುರಾಗಿದೆ. ಮೀನುಗಳು ಸೂರ್ಯೋದಯದ ವೇಳೆ ಯಥೇಚ್ಚವಾಗಿ ಲಬ್ಯವಾಗುತ್ತದೆ ಆದರೆ ಈ ಸಮಯದಲ್ಲಿ ಅಳಿವೆ ಸಮಸ್ಯೆಯಿಂದಾಗಿ ಬೋಟನ್ನು ಇಳಿಸಲಾಗುತ್ತಿಲ್ಲ. ಆದ್ದರಿಂದ ಇಲ್ಲಿಗೆ ಬ್ರೇಕ್ ವಾಟರ್ ಕಾಮಗಾರಿಯನ್ನು ನಡೆಸಿ ಅಳಿವೆಯಲ್ಲಿನ ಸಮಸ್ಯೆಯನ್ನ ಪರಿಹರಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.
ಹರೀಶ್ ಕಿರಣ್ ತುಂಗ, ಕುಂದಾಪುರ

Related posts

Leave a Reply