Breaking News

ಮಳೆ ಮೋಡದಲ್ಲಿ ದಾರಿ ತಪ್ಪಿದ ವಾಹನಗಳು, ಸೇತುವೆ ಹಾರು ಮತ್ತು ಮರವೇರಿದ ಕಾರು

ಕರಾವಳಿಯಲ್ಲಿ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಮಳೆಯಾಗುತ್ತಿದೆ. ಅಲ್ಲಲ್ಲಿ ವಾಹನ ಅವಘಡಗಳು ಸಂಭವಿಸಿದೆ.
ಉದ್ಯಾವರದಲ್ಲಿ ಸೇತುವೆ ಮೇಲಿನಿಂದ ಕೆಳಕ್ಕೆ ಮಿನಿ ಟೆಂಫೋವೊಂದು ಸೇತುವೆಯಿಂದ ಧುಮುಕಲೆತ್ನಿಸಿದೆ. ಚಾಲಕ ಅತೀ ವೇಗದಲ್ಲಿ ಬಂದು ಸೇತುವೆ ತಡೆಗೋಡೆಯ ಮೇಲೆಯೇ ಏರಿದೆ. ಅದೃಷ್ಟವಷಾತ್ ಯಾವುದೇ ಹಾನಿಯಾಗಿಲ್ಲ.
ವೇಣೂರು ಬಳಿ ಕಾರೊಂದು ಮರ ಏರಿದ ಘಟನೆ ನಡೆದಿದ್ದು ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇಲ್ಲಿಯೂ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ. ಮಂಗಳೂರಿನ ಕುಂಜತೂರಿನಲ್ಲಿ ಬಸ್ ಪಲ್ಟಿಯಾದ ಪರಿಣಾಮ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

Related posts

Leave a Reply