Header Ads
Header Ads
Breaking News

ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಹೊಡೆದಾಟ : ಗಾಂಜಾ ವ್ಯಸನಿ, ರೌಡಿಗಳ ಬಂಧನ

ಕೊಣಾಜೆ ಗ್ರಾಮದ ಅಡ್ಕರೆಪಡ್ಪುವಿನಲ್ಲಿ ನಡೆಯುತ್ತಿದ್ದ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಗಾಂಜಾ ವ್ಯಸನಿಗಳ ಕರಿಛಾಯೆ ಬಿದ್ದ ಪರಿಣಾಮ ಕಾರ್ಯಕ್ರಮದಲ್ಲಿ ಹೊಡೆದಾಟ ನಡೆದಿದ್ದು, ಐವರು ಆರೋಪಿಗಳನ್ನು ಕೊಣಾಜೆ ಪೊಲೀಸರು ರಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಉಳ್ಳಾಲದ ಮುಕಚ್ಚೇರಿ ಹಿಲರಿಯಾ ನಗರದ ನಿವಾಸಿಗಳಾದ ಸಿನಾನ್, ಸಲ್ಮಾನ್ ಮೊಹಮ್ಮದ್, ಸಮೀರ್, ಮಹಮ್ಮದ್ ಅಲಿ, ಮೊಹಮ್ಮದ್ ಸಿರಾಜ್ ಬಂಧಿತ ಆರೋಪಿಗಳು.

ಕೊಣಾಜೆ ಗ್ರಾಮದ ಅಡ್ಕರೆಪಡ್ಪು ಎಂಬಲ್ಲಿರುವ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈದ್-ಮಿಲಾದ್ ಪ್ರಯುಕ್ತ ಕಳೆದ ಮೂರು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಈ ನಡುವೆ ಮಂಗಳವಾರ ರಾತ್ರಿ ಕಾರ್ಯಕ್ರಮ ಪ್ರಯುಕ್ತ ಅಳವಡಿಸಲಾಗಿದ್ದ ಟ್ಯೂಬ್‌ಲೈಟ್‌ಗಳನ್ನು ಯಾರೋ ಒಡೆದಿದ್ದರು. ಈ ಪ್ರಕರಣ ಪತ್ತೆಹಚ್ಚುವ ಸಲುವಾಗಿ ಬುಧವಾರ ಸ್ಥಳೀಯರು ಕಾದು ಕುಳಿತಿದ್ದರು.

ಇದೇ ವೇಳೆ ಹೊರ ಊರಿನಿಂದ ಬಂದಿದ್ದ ನಾಲ್ವರು ಗಾಂಜಾ ವ್ಯಸನಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಲು ಮುಂದಾದಾಗ ತಮ್ಮ ತಪ್ಪನ್ನು ಅಲ್ಲಗಳೆದಿದ್ದರು. ಈ ಸಂದರ್ಭ ಕೊಣಾಜೆ ಪಂಚಾಯಿತಿಯ ಮಾಜಿ ಅಧ್ಯಕ್ಷ ಶೌಕತ್ ಅಲಿ ಹಾಗೂ ಸದಸ್ಯ ಅಬ್ದುಲ್ ಖಾದರ್ ಅವರೂ ಕೇಸು ದಾಖಲಿಸುವುದು ಬೇಡ ಎಂದು ಜಮಾಅತರಿಗೆ ತಿಳಿಸಿದ್ದರಿಂದ ಅವರನ್ನು ಬಿಟ್ಟು ಬಿಡಲಾಗಿತ್ತು.

ಆದರೆ ಕೆಲವೇ ಹೊತ್ತಿನಲ್ಲಿ 12ರಷ್ಟು ಯುವಕರು ಕಾರು ಮತ್ತು ಅಟೋದಲ್ಲಿ ತಲವಾರು ಹಾಗೂ ಚೈನ್‌ಗಳೊಂದಿಗೆ ಆಗಮಿಸಿ ಸ್ಥಳೀಯರೊಂದಿಗೆ ಹೊಡೆದಾಟ ನಡೆಸಿದ್ದಾರೆ. ಈ ಸಂದರ್ಭ ಅಬೂಬಕ್ಕರ್ ಎಂಬವರಿಗೆ ಗಾಯವಾಗಿದ್ದು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Related posts

Leave a Reply

Your email address will not be published. Required fields are marked *