Header Ads
Header Ads
Header Ads
Breaking News

ಮಹಡಿಯಿಂದ ಯುವಕ ಬಿದ್ದು ಮೃತ್ಯು

ಸುಳ್ಯದ ಮುಖ್ಯರಸ್ತೆಯ ಗಾಂಧಿನಗರದಲ್ಲಿರುವ ಕಾಂಪ್ಲೆಕ್ಸ್ ಒಂದರ ಮಹಡಿಯಿಂದ ಯುವಕನೊಬ್ಬ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕ ಆಲೆಟ್ಟಿ ಗ್ರಾಮದ ಕುಡೆಂಬಿ ಯತೀಶ ಎಂದು ಗುರುತಿಸಲಾಗಿದೆ.

ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಈತ ಕಟ್ಟಡದಲ್ಲಿ ಬಾಡಿಗೆ ರೂಂನಲ್ಲಿದ್ದು, ಘಟನೆಯ ಸಂದರ್ಭದಲ್ಲಿ ಪಾನಮತ್ತನಾಗಿದ್ದ ಎಂದು ತಿಳಿದುಬಂದಿದೆ. ಇದರಿಂದಾಗಿ ಆಯತಪ್ಪಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ತೇಜೇಶ್ವರ್ ತೊಡಿಕಾನ ಸುಳ್ಯ

Related posts

Leave a Reply