Header Ads
Header Ads
Breaking News

ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಉಡಾವಣೆಯ ಕೊನೆಗಳಿಗೆಯಲ್ಲಿ ತಾಂತ್ರಿಕ ಅಡಚಣೆ : ಇಸ್ರೋ ತಂಡದಿಂದ ಸ್ಪಷ್ಟನೆ

ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಗೆ ಕೊನೆಯ ಗಳಿಗೆಯಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದ್ದು, ಉಡಾವಣೆಯನ್ನು ರದ್ದು ಮಾಡಲಾಗಿದೆ. ಉಡಾವಣೆಗೆ ಇನ್ನು ಒಂದು ಗಂಟೆ ಬಾಕಿ ಇದ್ದಾಗ ತಾಂತ್ರಿಕ ದೋಷವೊಂದು ಇಸ್ರೋದ ಗಮನಕ್ಕೆ ಬಂದಿದೆ, ಹಾಗಾಗಿ ಮುನ್ನೆಚ್ಚರಿಕ ಕ್ರಮವಾಗಿ ಉಡಾವಣೆ ರದ್ದು ಮಾಡಲಾಗಿದೆ. ಚಂದ್ರಯಾನ-2 ನ ಮುಂದಿನ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಉಡಾವಣೆಗೆ ಇನ್ನು 56 ನಿಮಿಷ ಬಾಕಿ ಇದ್ದಾಗ ತಾಂತ್ರಿಕ ದೋಷವೊಂದು ಉಡಾವಣೆ ರಾಕೆಟ್ ನಲ್ಲಿ ಕಂಡು ಬಂದ ಕಾರಣ ಉಡಾವಣೆಯನ್ನು ರದ್ದು ಮಾಡಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಚಂದ್ರಯಾನ -2 ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಉಡಾವಣೆಯ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಯೋಜನೆ ರೂಪಿಸಿತ್ತು. ಉಡಾವಣೆ ಯಶಸ್ವಿ ಆಗಿದ್ದಿದ್ದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಪ್ರಥಮ ದೇಶ ನಮ್ಮದಾಗುತ್ತಿತ್ತು.

Related posts

Leave a Reply

Your email address will not be published. Required fields are marked *