Header Ads
Breaking News

ಮಹಾಕವಿ ಸಿನಿಮಾ ಎಲ್ಲರಿಗೂ ಸ್ಪೂರ್ತಿಯಾಗಲಿ : ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿಕೆ

ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಬದುಕು, ಬರಹ ಕನ್ನಡ ನಾಡಿನ ಎಲ್ಲರಿಗೂ ಮಾದರಿಯಾಗಿದೆ. ಹಲವು ಭಾμÉಗಳಲ್ಲಿ ಅಗಾಧ ಜ್ಞಾನ ಹೊಂದಿದ್ದ ಗೋವಿಂದ ಪೈ ಸಂಶೋಧಕರಾಗಿಯೂ ವಿಖ್ಯಾತರು. ಇಂತಹ ಮಹಾಮಹಿಮನ ಜೀವನವನ್ನು ಆಧರಿಸಿ ಮೂಡಿಬರಲಿರುವ ಮಹಾಕವಿ ಸಿನಿಮಾ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಮಂಗಳೂರು ಪೊಲೀಸ್ಆಯುಕ್ತ ಶಶಿಕುಮಾರ್ ಹೇಳಿದರು.

ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ಸ್ ಸುಗುಣ ರಘು ಭಟ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಹಾಕವಿ ಚಲನಚಿತ್ರದ ಗೋವಿಂದ ಪೈ ಸ್ಮಾರಕ ಗಿಳಿವಿಂಡಲ್ಲಿ ಚಿತ್ರಕಥೆ ಸಾಹಿತ್ಯದ ವಿಶೇಷ ಪೂಜೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಬೆಳಗಿಸಿ ಕಾರ್ಯಕ್ರಮಕ್ಕೆ ಹಾರೈಸಿದರು.


ಮಂಜೇಶ್ವರ ಲೇಡಿ ಆಫ್ ಮರ್ಸಿ ಚರ್ಚ್ ಧರ್ಮಗುರು ವಿನೋದ್ ವಿನ್ಸೆಂಟ್ ಸಲ್ದಾನ, ಸಿನಿಮಾರಂಗದ ಯುವ ಸ್ಪೂರ್ತಿ ನಮಿತಾರಾವ್, ವಿಕ್ರಮ್ ಸೂರಿ, ಧರ್ಮದರ್ಶಿ ಮಂಜು ಭಟ್ ಇದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಗೋವಿಂದ ಪೈ ಅವರ ಪುತ್ಥಳಿಕೆ ಹಾರ ಹಾಕಿ ಗೌರವ ಸೂಚಿಸಲಾಯಿತು.

Related posts

Leave a Reply

Your email address will not be published. Required fields are marked *