Header Ads
Breaking News

ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಮಂಗಳೂರಿನಲ್ಲಿ ಪ್ಲಾಗ್ ರನ್ ಎಂಬ ವಿನೂತನ ಕಾರ್ಯಕ್ರಮ

ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆಯಿಂದ ನಗರದಲ್ಲಿ ಫ್ಲಾಗ್ ರನ್ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಫ್ಲಾಗ್ ರನ್ ಎಂದರೆ ಓಡುತ್ತಾ ದಾರಿಯಲ್ಲಿ ಬಿದ್ದಿರುವ ಕಸವನ್ನು ಎತ್ತಿಕೊಂಡು ಬ್ಯಾಗ್‍ಗೆ ತುಂಬಿಸಿ ಕೊನೆಯ ತಾಣದಲ್ಲಿ ಅದನ್ನು ವಿಲೇವಾರಿ ಮಾಡುವ ವಿಭಿನ್ನ ಪರಿಕಲ್ಪನೆ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು ಪ್ಲಾಸ್ಟಿಕ್ ಮುಕ್ತ ಸಮಾಜ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಪ್ಲಾಸ್ಟಿಕ್‍ನಿಂದ ಏನೆಲ್ಲಾ ಅನಾಹುತ ಆಗಿದೆ ಎನ್ನುವುದನ್ನು ನಾವು ಈಗಾಗಲೇ ಮನಗಂಡಿದ್ದೇವೆ. ನಾವೆಲ್ಲರೂ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ. ಮಂಗಳೂರು ಸ್ವಚ್ಛತೆ, ಗ್ರೀನ್ ಮಂಗಳೂರು, ಪ್ಲಾಸ್ಟಿಕ್ ಮುಕ್ತ ಮಂಗಳೂರು ಎಂಬ ಬಗ್ಗೆ ಪ್ರತಿಜ್ಞೆಯನ್ನು ಸ್ವೀಕರಿಸಬೇಕು ಎಂದು ಹೇಳಿದರು.
ಆನಂತರ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು, ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಯ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.ಇದೇ ವೇಳೆ ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಗ್ ರನ್‍ನಲ್ಲಿ ಪಾಲ್ಗೊಂಡರು.
ಇನ್ನೊಂದು ವಿಶೇಷ ಎಂದರೆ ಗಾಂಧಿ ಜಯಂತಿಯಂದು ಮಾತ್ರ ಗಾಂಧಿಯವರಿಗೆ ಕನ್ನಡಕವನ್ನು ತೊಡಿಸಲಾಗುತ್ತಿದೆ. ಗಾಂಧೀಜಿಯವರ ಸ್ಟ್ಯಾಚುವಿನಲ್ಲಿದ್ದ ಗಾಂಧಿ ಕನ್ನಡಕವನ್ನು ಯಾರೋ ಕಿಡಿಗೇಡಿಗಳು ಪತ್ರೀ ಬಾರಿ ಎಗರಿಸಿಕೊಂಡು ಹೋಗುತ್ತಿದ್ದು ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿಯೋರ್ವರು ಗಾಂಧಿ ಜಯಂತಿಯಂದು ಮಾತ್ರ ಕನ್ನಡಕ ತೊಡಿಸಿ ಸಂಜೆ ವೇಳೆಗೆ ಕನ್ನಡಕವನ್ನು ಜೋಪಾನವಾಗಿರಿಸುವುದನ್ನು ನಾವಿಲ್ಲಿ ಕಾಣಬಹುದು.ಪ್ಲಾಗ್ ರನ್‍ನಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *