Header Ads
Header Ads
Header Ads
Breaking News

ಮಹಾತ್ಮ ಗಾಂಧೀಜಿ ಜೀವನ ಚಿತ್ರಣದ ಛಾಯಾಚಿತ್ರ, ಗಾಂಧೀಜಿಯ ಹತ್ಯೆಯ ಭಾಗ ಇಲ್ಲದಿರುವುದು ಅಪೂರ್ಣ : ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ಬಂಟ್ವಾಳ: ಮಹಾತ್ಮ ಗಾಂಧೀಜಿಯನ್ನು ಜೀವನ ಚಿತ್ರಣದ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಯ ಹತ್ಯೆಯ ಭಾಗ ಇಲ್ಲದಿರುವುದು ಅಪೂರ್ಣ ಹಾಗೂ ನೋವು ತಂದಿದೆ. ಅದನ್ನು ಪೂರ್ಣಗೊಳಿಸಿ ಜನರಿಗೆ ತಿಳಿಸುವ ಅನಿವಾರ್ಯತೆ ಇದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ೧೫೦ನೇ ಜಯಂತಿಯ ಪ್ರಯುಕ್ತ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಕಳೆದ ಸೋಮವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಗಾಂಧೀಜಿಯವರ ಜೀವನ ಚರಿತ್ರೆ ತಿಳಿಸುವ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಗಾಂಧೀಜಿಯವರ ಛಾಯಚಿತ್ರ ಪ್ರದರ್ಶನ ಸಮಯೋಚಿತ ಹಾಗೂ ಅರ್ಥಪೂರ್ಣವಾದುದು. ಗಾಂಧಿಯವರ ಅಹಿಂಸಾ ಚಳುವಳಿ, ಅವರ ಸೇವೆ, ತ್ಯಾಗ, ಸಾಮಾಜಿಕ ಸಾಮರಸ್ಯಕ್ಕೆ ಕೊಟ್ಟಂತಹ ಸಂದೇಶಗಳನ್ನು ವರ್ತಮಾನದ ದಿನಗಳಲ್ಲಿ ಮರೆಮಾಚುವಂತಹ ಪ್ರಯತ್ನ ನಡೆಯುತ್ತಿರುವುದು ವಿಷಾದಕರ. ಅಂತಿಮವಾಗಿ ಗಾಂಧೀಜಿಯ ಹತ್ಯೆಯ ಭಾಗವನ್ನು ತೋರಿದೇ ಛಾಯಾಚಿತ್ರ ಪ್ರದರ್ಶನ ಅಪೂರ್ಣವಾಗಿದೆ. ಆ ಸನ್ನಿವೇಷವನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಪೂಜಾರಿ, ಸಜೀಪಮೂಡ ಗ್ರಾ,ಪಂ.ಸದಸ್ಯ ರಮೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *