Header Ads
Header Ads
Breaking News

ಮಹಾಮಸ್ತಕಾಭಿಷೇಕ: ಮೊಬೈಲ್ ಕಣ್ಣುಗಳಲ್ಲಿ ಸೆರೆಯಾದ ಮೆರವಣಿಗೆ

ಧರ್ಮಸ್ಥಳ:ಭಗವಾನ್‍ಬಾಹುಬಲಿಯ ಮಹಾಮಸ್ತಕಾಭಿಷೇಕದಲ್ಲಿ ನಡೆದ ಭರತ ದಿಗ್ವಿಜಯ ಸಂಭ್ರಮವು ನೂರಾರು ಮೊಬೈಲ್‍ಗಳ ಕಣ್ಣಲ್ಲಿ ಸೆರೆಯಾಯಿತು. ನೆರೆದ ಭಕ್ತ ಸಮೂಹ ತಮ್ಮ ಮೊಬೈಲ್‍ಗಳ ಮೂಲಕ ಸುಂದರ ಐತಿಹಾಸಿಕ ಕ್ಷಣವನ್ನುಚಿತ್ರೀಕರಿಸಿಕೊಂಡರು.

ಬಾಹುಬಲಿಯ ಜೀವನಚರಿತ್ರೆಯ ಮರುಸೃಷ್ಟಿಯ ಕಥಾನಕ ಅನಾವರಣಗೊಂಡಿತು.ದೇಶದ ನಾನಾ ಭಾಗಗಳಿಂದ ಭಾಗವಹಿಸಿದ ಸಾವಿರಾರು ಭಕ್ತಾದಿಗಳು ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡರು. ದಿಗ್ವಿಜಯದ ಯಾತ್ರೆ ಸರ್ವತೋಭದ್ರ ಮಂಟಪದಿಂದ ಆರಂಭಗೊಂಡು ಶಾಂತಿವನದವರೆಗೆ ಸಾಗಿತು. ಈ ಐತಿಹಾಸಿಕ ದೃಶ್ಯವನ್ನು ಸೆರೆಹಿಡಿಯಲು ಡ್ರೋನ್ ಹಾಗೂ ವೀಡಿಯೋ ಕ್ಯಾಮರಾಗಳನ್ನು ಬಳಸಲಾಗಿತ್ತು. ನೆರೆದ ಭಕ್ತವೃಂದ ಈ ಅದ್ಭುತ ಕ್ಷಣಗಳನ್ನು ತಮ್ಮ ಮೊಬೈಲ್‍ಗಳಲ್ಲಿ ಚಿತ್ರೀಕರಿಸಿಟ್ಟುಕೊಂಡರು.

ಮೆರವಣಿಗೆಯನ್ನು ನೋಡಲು ಉತ್ಸುಕತೆಯಿಂದ ಆಗಮಿಸಿದ್ದ ಭಕ್ತರು ಸಾಲುಸಾಲಾಗಿ ತಮ್ಮದೇ ಆದ ಶೈಲಿಯಲ್ಲಿ ಸುಂದರ ಘಳಿಗೆಗಳನ್ನು  ಸೆರೆಹಿಡಿದರು. ಸಣ್ಣ ಮಕ್ಕಳೂ ಕೂಡಾ ಪೋಷಕರ ಮೊಬೈಲ್ ಕಸಿದುಕೊಂಡು ಪೋಟೋ ಕ್ಲಿಕ್ಕಿಸುತ್ತಿದ್ದದ್ದ್ದು ಕಂಡುಬಂತು. ಜನಸ್ತೋಮವು ಅಶ್ವದಳ ಮತ್ತು ರಾಜ್ಯದ ವಿವಿಧ ಸ್ಥಳಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಕಲಾವಿದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ವರದಿ : ಹೊನಕೇರಪ್ಪ ಸಂಶಿ

ಚಿತ್ರ : ಆದರ್ಶ ಕೆ.ಜಿ.

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ಎಸ್.ಡಿ.ಎಂಕಾಲೇಜುಉಜಿರೆ

 

 

 

 

Related posts

Leave a Reply

Your email address will not be published. Required fields are marked *