Header Ads
Header Ads
Header Ads
Breaking News

ಮಹಾರಾಷ್ಟ್ರದ ಬೆಳವಣಿಗೆ ರಾಜಕಾರಣದ ಅಧಃಪತನ : ಉಡುಪಿಯಲ್ಲಿ ಪೇಜಾವರ ಶ್ರೀ ಅಭಿಪ್ರಾಯ

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಇದು ರಾಜಕೀಯ ಪಕ್ಷಗಳ ನೈತಿಕತೆ ಅಧಃ ಪತನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಪೇಜಾವರ ಶ್ರೀ ಬಹುಮತ ಬಾರದಿದ್ದರೆ ಒಮ್ಮತದಿಂದ ಸರಕಾರ ಮಾಡಬೇಕು.ಗೆದ್ದ ಶಾಸಕರೆಲ್ಲ ಜೊತೆಯಾಗಿ ಅಧಿಕಾರ ಮಾಡಬೇಕು. ನೈತಿಕತೆ ಇಲ್ಲದ ಮೈತ್ರಿ ಒಳ್ಳೇದಲ್ಲ. ದೇಶದ ರಾಜಕೀಯ ಗದ್ದಲ ಗಳಿಂದ ಬೇಸರವಾಗಿದೆ. ಶಿವಸೇನೆ ಬಿಜೆಪಿಗಿಂತ ಪ್ರಖರ ಹಿಂದುತ್ವ ವಾದಿ. ಕಾಂಗ್ರೆಸ್ ಎಸ್‌ಸಿಪಿ ಜೊತೆ ಶಿವಸೇನೆ ಮೈತ್ರಿಯಾಗಿದೆ. ಬಿಜೆಪಿ ಎನ್‌ಸಿಪಿ ಸಖ್ಯ ಬೆಳೆಸಲು ಮುಂದಾಗಿತ್ತು. ನಾಲ್ಕು ಪಕ್ಷಗಳು ಸಿದ್ಧಾಂತ, ನೈತಿಕ ಶೂನ್ಯತ್ವ ಪಡೆದಿದೆ. ಇಂತಹ ಸಂದರ್ಭ ಮರು ಚುನಾವಣೆ ಒಳಿತು.ನನಗೆ ಯಾವ ರಾಜಕೀಯ ಪಕ್ಷದ ಬಗ್ಗೆ ಒಲವು ಇಲ್ಲ. ಕರ್ನಾಟಕ-ಮಹಾರಾಷ್ಟ್ರ ನಡುವೆ ವ್ಯತ್ಯಾಸ ಕಾಣುತ್ತಿಲ್ಲ. ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ -ಎನ್ ಸಿಪಿ ಅಧಿಕಾರ ಹಿಡಿಯುವ ಅಗತ್ಯ ಇರಲಿಲ್ಲ ಎಂದು ಅಭಿಪ್ರಾಯಪಟ್ಟರು. ಕರ್ನಾಟಕದಲ್ಲಿ ಉಪಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಬಹುಮತ ಬಂದರೆ ಬಿಜೆಪಿ ಸರಕಾರ ನಡೆಸಬೇಕು.ಬಹುಮತ ಬಾರದಿದ್ದರೆ ಜೆಡಿಎಸ್ ಜೊತೆ ಮೈತ್ರಿ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮೈತ್ರಿ ಸರಕಾರ ಯಶಸ್ವಿಯಾಗುತ್ತಿಲ್ಲ ಎಂದರು.

 

Related posts

Leave a Reply

Your email address will not be published. Required fields are marked *