Header Ads
Breaking News

ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಮುಂಬಯಿ: ಸಂಘಸಂಸ್ಥೆಗಳಲ್ಲಿ ವೈಮನಸ್ಸು ಸ್ವಾಭಾವಿಕವಾದುದು. ಸಂಸ್ಥೆಯೊಳಗಿನ ವೈಮನಸ್ಸನ್ನು ಬುದ್ಧಿಜೀವಿಗಳು ಹೊರಗೆ ತಿಳಿಸಿದಾಗ ಮೂರನೇಯವರೇ ಲಾಭದಾಯಕರಸ್ಥರು ಆಗುವರು. ನಿನ್ನೆ ತನಕ ಬೇವು ತಿಂದು ಬಂದ ನಾವುಗಳು ಇವತ್ತಿನಿಂದ ಬೆಲ್ಲವನ್ನು ಸವಿದು ಹೊಸ ಬದುಕಿನತ್ತ ಸಾಗಬೇಕಾಗಿದೆ ಎಂದು ಮುಂಬಯಿ ಉಚ್ಛನ್ಯಾಯಲಯದ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್ ತಿಳಿಸಿದರು.
ಅವರು ಬಾಂದ್ರಾ ಪೂರ್ವದ ಖೇರ್‍ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2019-2021ರ ಸಾಲಿನ ಪದಾಧಿಕಾರಿಗಳ ಆಯ್ಕೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ನ್ಯಾ| ಸಾಲ್ಯಾನ್ ಮಾತನಾಡಿದರು. ಪತ್ರಕರ್ತರ ಸಂಘದ ಸಲಹಾ ಸಮಿತಿ ಸದಸ್ಯರಾದ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಗ್ರೇಗೋರಿ ಡಿಅಲ್ಮೇಡಾ, ಮತ್ತಿತರರು ವೇದಿಕೆಯಲ್ಲಿ ಆಸೀನರಾಗಿದ್ದು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭಾರೈಸಿದರು.

Related posts

Leave a Reply

Your email address will not be published. Required fields are marked *