Header Ads
Header Ads
Breaking News

ಮಹಾರಾಷ್ಟ್ರ ಮೂಲದವರಿಂದ ಪುತ್ತೂರಿನಲ್ಲಿ ಕ್ರಿಕೆಟ್ ಬ್ಯಾಟ್ ತಯಾರಿ.

ಪುತ್ತೂರು: ಕ್ರಿಕೆಟ್ ಎಂಬುದು ಬ್ಯಾಟ್ ಮತ್ತು ಬಾಲ್‌ಗಳ ಆಟವಾಗಿದೆ. ಕ್ರಿಕೆಟ್ ಇಂಗ್ಲೆಂಡ್ ದೇಶದ ರಾಷ್ಟ್ರೀಯ ಕ್ರೀಡೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ದಿಕ್ಕಲ್ಲೂ ಕ್ರಿಕೆಟ್ ಆಟವನ್ನು ನಾವು ನೋಡಬಹುದು. ಕ್ರಿಕೆಟ್ ಎಂದಾಗ ಯುವಕರಲ್ಲಿ ಮೂಡಿಬರುವ ಉತ್ಸಾಹವನ್ನು ವಿವರಿಸಲು ಸಾಧ್ಯವಿಲ್ಲ. ಕ್ರಿಕೆಟ್ ಆಡಲು ಹೊರಟರೆ ಸಮಯ ಹೋಗುವುದೇ ತಿಳಿಯುದಿಲ್ಲ.

ಕ್ರಿಕೆಟ್ ಆಡಲು ಬ್ಯಾಟ್ ಮತ್ತು ಬಾಲ್ ಅಗತ್ಯ. ಬ್ಯಾಟ್‌ನ್ನು ವಿವಿಧ ರೀತಿಯ ಮರದ ತುಂಡುಗಳಲ್ಲಿ ತಯಾರು ಮಾಡುತ್ತಿದ್ದಾರೆ. ಕ್ರಿಕೆಟ್ ಬ್ಯಾಟ್‌ಗಳಲ್ಲಿ ವಿವಿಧ ರೀತಿಯ ಬ್ಯಾಟ್‌ಗಳಿವೆ. ಆದರೆ ಹಿಂದೆ ಬ್ಯಾಟ್‌ಗಳನ್ನು ಅವರವರೇ ತಯಾರು ಮಾಡುತ್ತಿದ್ದರು. ಆದರೇ ಈಗಿನ ಕಾಲದಲ್ಲಿ ಬ್ಯಾಟ್‌ನ್ನು ಅಂಗಡಿಗಳಿಂದ ಖರೀದಿ ಮಾಡಿತ್ತಿದ್ದಾರೆ.ಅವರು ಈ ಕೆಲಸವನ್ನು ಸುಮಾರು 20ರಿಂದ 25 ವರ್ಷಗಳಾಗಿವೆ. ಇದುವರೆಗೆ ಗುಜಾರಾತ್, ರಾಜಾಸ್ಥಾನ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಮಾರಾಟ ಮಾಡಿದ್ದಾರೆ. ಈ ಬ್ಯಾಟ್‌ನ್ನು 2 ಸಂಸಾರದವರು ಒಟ್ಟಾಗಿ ತಯಾರಿಸುತ್ತಿದ್ದಾರೆ ಹಾಗೂ ಪುತ್ತೂರಿಗೆ 9 ಮಂದಿ ಬಂದಿದ್ದಾರೆ. ಅವರ ಆಹಾರವನ್ನು ದಿನಕ್ಕೆ2 ಬಾರಿ, ಅವರೇ ತಯಾರು ಮಾಡುತ್ತಿದ್ದಾರೆ.ಇದುವರೆಗೆ ಹೆಚ್ಚೇನು ಬ್ಯಾಟ್‌ಗಳು ಮಾರಾಟವಾಗಿಲ್ಲ. ಆದರೆ ಮಕ್ಕಳಿಗೆ ರಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಟ್‌ಗಳು ಮಾರಾಟವಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೇವೆ. ಪುತ್ತೂರಿನ ಸಮೀಪದ ಬೋಳುವಾರಿನಲ್ಲಿ ಬ್ಯಾಟ್‌ಗಳನ್ನು ತಯಾರುಮಾಡುತ್ತಿದ್ದಾರೆ. ಬ್ಯಾಟ್ ಮಾಡುವವರು ಮೂಲತಃ ಮಹಾರಾಷ್ಟ್ರದವರು. ಇವರು ಬ್ಯಾಟ್‌ನ್ನು ಸಿಲ್ವರ್ ಎಂಬ ಮರದ ತುಂಡುಗಳಿಂದ ತಯಾರು ಮಾಡುತ್ತಾರೆ. ಈ ಮರದ ತುಂಡುಗಳನ್ನು ಹೆಚ್ಚಾಗಿ ಬೊಮ್ಮನಹಳ್ಳಿ, ಬೆಂಗಳೂರಿನಿಂದ ತೆಗೆದುಕೊಂಡು ಬರುತ್ತಾರೆ. ಇವರು ಇಲ್ಲಿಗೆ ಬಂದು ಒಂದು 25ದಿನಗಳಾಗಿವೆ. ಅವರು ತಯಾರಿಸುವ ಬ್ಯಾಟ್‌ಗೆ ರೂ.200ರಿಂದ ರೂ.400ರ ವರೆಗೆ ಇದೆ. ಅವರು ಸಣ್ಣ ಮಕ್ಕಳಿಗೆಂದು ಸಣ್ಣ ಬ್ಯಾಟ್ ಹಾಗೂ ಯುವಕರಿಗೆಂದು ದೊಡ್ಡ ಬ್ಯಾಟ್ ತಯಾರಿಸುತ್ತಾರೆ. ಅವರು ಮಾಡುವ ಬ್ಯಾಟ್‌ಗೆ ಎಲ್ಲಾ ಕೆಲಸ ಸೇರಿ ಸುಮಾರು ರೂ. 300 ತಗಲುತ್ತದೆ. 20-25 ವರ್ಷಗಳ ಪರಣೀತಿಯನ್ನು ಪಡೆದಿದ್ದಾರೆ.

Related posts

Leave a Reply