Header Ads
Header Ads
Breaking News

ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಹಮ್ಮಿಕೊಂಡ ಯಕ್ಷಗಾನ:ಯಕ್ಷಗಾನಕ್ಕೆಅಡ್ಡಿಪಡಿಸಿದ ಕಾವೂರು ಪೊಲೀಸರು

ಮಹಾ ಶಿವರಾತ್ರಿ ಜಾಗರಣೆಯ ಪ್ರಯುಕ್ತ ನಗರದ ಕಾವೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಏರ್ಪಡಿಸಲಾಗಿದ್ದ ಭಜನೆ ಹಾಗೂ ಯಕ್ಷಗಾನಕ್ಕೆ ಕಾವೂರು ಪೊಲೀಸರು ಅಡ್ಡಿ ಪಡಿಸಿ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ದೇವಳದ ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಭಕ್ತರು ಪ್ರತಿಭಟನೆ ನಡೆಸಿದ್ರು. ಸ್ಥಳಕ್ಕೆ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ.ವೈ.ಭರತ್ ಶೆಟ್ಟಿ ಭೇಟಿ ನೀಡಿ, ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ, ಯಕ್ಷಗಾನಕ್ಕೆ ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಇನ್ನೂ ಕಾವೂರು ಪೊಲೀಸರು ಐಜಿಪಿ ಆದೇಶದ ಮೇರೆಗೆ ಯಕ್ಷಗಾನಕ್ಕೆ ತಡೆವೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.

Related posts

Leave a Reply

Your email address will not be published. Required fields are marked *