Header Ads
Header Ads
Breaking News

ಮಹಿಳಾ ಸಬಲೀಕರಣ ವಿಶೇಷ ಉಪನ್ಯಾಸ. ಉನ್ನತ ಹುದ್ದೆಗಳನ್ನುಗಳಿಸುವ ಧೈರ್ಯ ಮಹಿಳೆಯಲ್ಲಿರಲಿ. ಆಳ್ವಾಸ್‌ನಲ್ಲಿ ಐಜಿಪಿ ರೂಪಾ ಅಭಿಪ್ರಾಯ.

ಪ್ರತಿಯೊಬ್ಬ ಮಹಿಳೆಯೂ ಸಬಲೀಕರಣದ ಪಥದಲ್ಲಿ ಆರ್ಥಿಕವಾಗಿ ಸದೃಢರಾಗಬೇಕು. ಕುಟುಂಬಕ್ಕೆ ಎರಡನೇ ಆದಾಯ ಅನಿರ್ವಾಯವಾದಾಗ ಮಾತ್ರ ಮಹಿಳೆಯರು ಉದ್ಯೋಗ ಮಾಡಬೇಕು ಎನ್ನುವ ಮನಸ್ಥಿತಿ ಬದಲಾಗಿ, ವ್ಯಕ್ತಿತ್ವ ವಿಕಸನದ ಉದ್ದೇಶವನ್ನೂ ಹೊಂದಿರಬೇಕು.ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸುವುದು ಮಾತ್ರವಲ್ಲ ಉನ್ನತ ಹುದ್ದೆಗಳನ್ನು ಪಡೆಯುಂತಾಗಬೇಕು.ಅದಕ್ಕೆ ಬೇಕಾದ ದೈರ್ಯ ಪ್ರತಿಯೊಬ್ಬ ಮಹಿಳೆಯರಿಗೆ ಬರಬೇಕು ಎಂದು ಐ.ಜಿ.ಪಿ ರೂಪಾ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ ಕುವೆಂಪು ಸಭಾಭವನದಲ್ಲಿ ವುಮೆನ್ ಡೆವಲಪ್‌ಮೆಂಟ್ ಸೆಲ್ ಐಕ್ಯೂಎಸಿ ಅಧೀನದಲ್ಲಿ “ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ’ ಎಂಬ ವಿಷಯದಲ್ಲಿ ಆಯೋಜಿಸದ್ದ ವಿಶೇಷ ಉಪನ್ಯಾಸ ಕಾರ್‍ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈಗಿನ ಪೈಪೋಟಿ ಯುಗದಲ್ಲಿ ನಾವು ಸಮಸ್ಯೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ ಹಿರಿಯರಿಂದ ಅಥವಾ ಮಾನವ ಸಂಬಂಧಗಳಿಂದ ಪರಿಹಾರಗಳನ್ನು ಪಡೆಯುವುದನ್ನು ಮರೆತಿದ್ದೇವೆ. ನಮ್ಮಲ್ಲಿರುವ ಕೌಶಲ್ಯವನ್ನು ನಾವೇ ಗುರುತಿಸಿಕೊಂಡು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ಮುಖ್ಯ. ಸ್ತ್ರೀ ಯು ಸಬಲಳಾಗಬೇಕಾದರೆ ತನ್ನ ಸಹಾಯವನ್ನು ತಾನೇ ಮಾಡಿಕೊಳ್ಳಬೇಕೇ ಹೊರತು ಇತರರಿಂದ ಸಹಕಾರವನ್ನು ಅಪೇಕ್ಷಿಸಕೂಡದು. ತನ್ನ ಸಾಧನೆಯತ್ತ ಸಾಗಲು ಆಕೆ ಸನ್ಮಾರ್ಗದೊಂದಿಗೆ, ಆತ್ಮವಿಶ್ವಾಸ, ಕನಸು ನನಸಾಗಿಸುವ ಛಲ ಹಾಗೂ ಸವಾಲುಗಳನ್ನೆದುರಿಸುವ ಧೈರ್ಯವನ್ನು ಹೊಂದಿರಬೇಕು ಎಂದರು.ಆಳ್ವಾಸ್ ಕಾಲೇಜಿನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಯುವಜನತೆ ಡಿ.ರೂಪಾ ಅವರನ್ನು ಆದರ್ಶವಾಗಿಸಿಕೊಂಡು ತಮ್ಮ ಮುಂದಿನ ಗುರಿಯ ಕುರಿತು ಈಗಿನಿಂದಲೆ ಕಾರ್‍ಯಪ್ರವೃತ್ತರಾಗಬೇಕು ಹಾಗೂ ಅದನ್ನು ಸಾಧಿಸುವಲ್ಲಿ ಏಕಾಗ್ರತೆಯನ್ನು ಹೊಂದಿರಬೇಕು ಎಂದರು. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ಶಾಜಿಯಾ ಸಯ್ಯೆದ್ ಹಾಗೂ ಉಪಸ್ಥಿತರಿದ್ದರು.

Related posts

Leave a Reply