Header Ads
Header Ads
Breaking News

ಮಹಿಳಾ ಸ್ನೇಹಿಯಾಗಿ ತಿರುವನಂತಪುರ, ಸರಕಾರದ ಒಂದು ದಿನದ ವಸತಿ ಯೋಜನೆ

ವಿವಿಧ ಕೆಲಸಗಳಿಗೆ ರಾಜಧಾನಿಗೆ ಭೇಟಿ ನೀಡುವ ಮಹಿಳೆಯರಿಗೆ ಸುರಕ್ಷಿತ ಸೌಕರ್ಯ ಕಲ್ಪಿಸಲು ಕೇರಳ ಸರ್ಕಾರವು ಒಂದು ದಿನದ ವಸತಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಆ ಮೂಲಕ ತಿರುವನಂತಪುರವನ್ನು ಮಹಿಳಾ ಸ್ನೇಹಿಯಾಗಿ ರೂಪಿಸಲು ನಿರ್ಧರಿಸಿದೆ.
ಉದ್ಯೋಗ ಸಂದರ್ಶನ, ಪರೀಕ್ಷೆಗೆ ಹಾಜರಾಗುವುದು, ಸಭೆಯಲ್ಲಿ ಭಾಗವಹಿಸುವ ಸಂಬಂಧ ರಾಜ್ಯದ ವಿವಿಧ ಭಾಗಗಳಿ0ದ ಇಲ್ಲಿಗೆ ಬರುತ್ತಾರೆ. ಇಂತಹವರಿಗೆ ಸುರಕ್ಷಿತ ವಸತಿ ಹಾಗೂ ಮಿತ ದರದಲ್ಲಿ ಆಹಾರ ಒದಗಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವೆ ಕೆ. ಕೆ. ಶೈಲಜಾ ತಿಳಿಸಿದರು.
ತಂಪನೂರಿನಲ್ಲಿರುವ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ೭ನೇ ಮಹಡಿಯಲ್ಲಿ ಜಾಗ ಖಾಲಿಯಿದೆ. ಇದು ನಗರದ ಹೃದಯಭಾಗದಲ್ಲಿದ್ದು, ಇದಕ್ಕಾಗಿ ರೂ. ೩೦.೫೬ ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಸಬಲೀಕರಣ ಯೋಜನೆಯಡಿ ಇದನ್ನು ಜಾರಿಗೊಳಿಸಲಾಗುತ್ತಿದೆ.

Related posts

Leave a Reply