Header Ads
Header Ads
Breaking News

ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ: ರೆಡ್‌ ಎಫ್‌ ಎಂನಿಂದ ವಿನೂತನ ಕಾರ್ಯಕ್ರಮ

ಮಂಗಳೂರಿನ ಜನಪ್ರೀಯ ರೇಡಿಯೋ ಸ್ಟೇಷನ್ ರೆಡ್ ಎಫ್‌ಎಂ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸುವ ಕಾರ್ಯಕ್ರಮ ಪಾಂಡೇಶ್ವರದ ಫೋರಂ  ಫಿಜಾ ಮಾಲ್‌ನಲ್ಲಿ ನಡೆಯಿತು.

ಕಳೆದ ಹತ್ತು ವರುಷಗಳಿಂದ ಮನರಂಜನೆಯ ಜೊತೆ ಸಾಮಾಜಿಕ ಕಳಕಳಿಯುಳ್ಳ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಮಂಗಳೂರಿನ ಜನಪ್ರೀಯ ರೇಡಿಯೋ ಸ್ಟೇಷನ್ ರೆಡ್ ಎಫ್ ಎಂ ಕಳೆದ ವರ್ಷ ಮಹಿಳಾ ದಿನಾಚರಣೆಯ ಪ್ರಯುಕ್ತ ಎಂಟು ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸೂಪರ್ ಸಾಧಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಈ ವರ್ಷ ಮಹಿಳಾ ದಿನಾಚರಣೆಯ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳೆಯರಿಗಾಗಿ ಹೊಲಿಗೆ ಯಂತ್ರವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ,ನಗರದ ಪಾಂಡೇಶ್ವರದಲ್ಲಿರುವ ಫೋರಮ್ ಫೀಝ ಮಾಲ್ ನಲ್ಲಿ ಅದರ ವಿತರಣೆ ನಡೆಯಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಕನ್ನಡ ಚಿತ್ರನಟಿ ಜಾಲಿ ಡೇಸ್ ಚಿತ್ರ ಖ್ಯಾತಿಯ ಐಶ್ವರ್ಯ ನಾಗ್ ಹಾಗು ಕೆಎಂಸಿ ಹಾಸ್ಪಿಟಲ್ ನ ಅಸ್ಸೊಸಿಯೆಟ್ ಡೀನ್ ,ಮಕ್ಕಳ ತಜ್ಞೆ ಪ್ರೊಫೆಸರ್ ನೂತನ್ ಕಾಮತ್ ಆಗಮಿಸಿ ಹತ್ತು ಮಹಿಳೆಯರಿಗೆ ಹೊಲಿಗೆಯಂತ್ರ ವಿತರಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆಎಂಸಿ ಹಾಸ್ಪಿಟಲ್ ನ ಅಸ್ಸೊಸಿಯೆಟ್ ಡೀನ್ ,ಮಕ್ಕಳ ತಜ್ಞೆ ಪ್ರೊಫೆಸರ್ ನೂತನ್ ಕಾಮತ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಬೇಕು ,ಬಡ ವ್ಯಕ್ತಿಯೊಬ್ಬನಿಗೆ ಹೊಟ್ಟೆ ತುಂಬಲು ಆಹಾರ ಕೊಡುವುದಕ್ಕಿಂತ ಅದನ್ನು ಸಂಪಾದಿಸುವ ಮಾರ್ಗವನ್ನು ಹೇಳಿಕೊಡಬೇಕು ಆಗಲೇ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಆನಂತರ ನಟಿ ಐಶ್ವರ್ಯ ನಾಗ್ ಮಾತನಾಡಿ, ಅವರು ಇಂತಹ ಒಳ್ಳೆ ಕೆಲಸ ಮಾಡ್ತಾ ಇರೋದಕ್ಕೆ ರೆಡ್ ಎಫ್ ಎಂ ಗೆ ಅಭಿನಂದನೆ ಸಲ್ಲಿಸಿದರು.

ಹೊಲಿಗೆ ಯಂತ್ರವನ್ನು ಸ್ವೀಕರಿಸಿ ಮಾತಾಡಿದ ಜೂಲಿಯೆಟ್ ಕಾರ್ಲೊ ಅವರು ಮಾತಾಡಿ ,ರೆಡ್‌ಎಫ್ ಎಂ ಯಾವಾಗ್ಲೂ ಕೇಳ್ತಾ ಇದ್ದೆ ,,ಈಗ ಅದೇ ನನ್ನ ಜೀವನಕ್ಕೆ ದಾರಿ ತೋರಿಸಿದೆ ಎಂದು ಭಾವುಕರಾಗಿ ನುಡಿದರು.

ಕಾರ್ಯಕ್ರಮದಲ್ಲಿ ರೆಡ್ ಎಫ್ ನ ಸ್ಟೇಷನ್ ಹೆಡ್ ಶೋಭಿತ್ ಶೆಟ್ಟಿ ,ಸೀನಿಯರ್ ಪ್ರೊಡ್ಯೂಸರ್ ಯಶ್ ರಾಜ್ ,ಹೆಚ್ ಆ