Header Ads
Header Ads
Breaking News

ಮಹೇಶ್ ಪದವಿ ಪೂರ್ವ ಕಾಲೇಜು ಪಥಮ ಪಿಯುಸಿ ವಿದ್ಯಾರ್ಥಿಗಳಿಗೆ “ಓರಿಯೆಂಟೇಶನ್ ” ಕಾರ್ಯಕ್ರಮ

ಮಂಗಳೂರಿನ ಪ್ರತಿಷ್ಠಿತ ಕಾಲೇಜಾದ ಮಹೇಶ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮವು ಲೇಡಿಹಿಲ್‌ನ ಉರ್ವಾ ಚರ್ಚ್ ಹಾಲ್‌ನಲ್ಲಿ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಇಂಸ್ಟಿಟ್ಯುಟ್ನ ಫ್ರೊಫೆಸರ್ ಡಾ ಸುಧೀರ್ ರಾಜ್ ಕೆ ಭಾಗವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿ ಮಗುವೂ ಒಬ್ಬ ಸಾಧಕನಾಗಿದ್ದಾನೆ. ಆತ ಸಾಧನೆ ಮಾಡಲು ಶಕ್ತನಾಗಿದ್ದಾನೆ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.

   

ಆರ್ಯನ್ ಪೌಂಡೇಶನ್‌ನ ಟ್ರಸ್ಟಿಯಾದ ಸುಜಿತ್ ಕುಮಾರು ಅವರು ಮಾತನಾಡಿ, ಮಂಗಳೂರಿನಿಂದ ಬೀದರ್‌ವರೆಗೆ ಸಂಸ್ಥೆಯ ಒಟ್ಟು21 ಕಡೆಗಳಲ್ಲಿ ಕಾಲೇಜು ಇದ್ದು ಪ್ರತಿಯೊಂದು ಜಿಲ್ಲೆಯ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಾ ನವೀನ್ ಶೆಟ್ಟಿ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅನಿಲ್ ಮಸ್ಕರೇನಸ್, ಯಶಸ್ವಿನಿ, ಮಹಮ್ಮದ್ ನಾಝಿಯಾ ಉಪಸ್ಥಿತರಿದ್ದರು.

Related posts

Leave a Reply