Header Ads
Header Ads
Breaking News

ಮಹೇಶ್ ಪಿಯು ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ

ಮಂಗಳೂರಿನ ಕೊಟ್ಟಾರದಲ್ಲಿರುವ ಮಹೇಶ್ ಪಿಯು ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗಾ ದಿನಾಚರಣೆಯಲ್ಲಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪತಂಜಲಿ ಯೋಗ ತರಬೇತುದಾರರಾದ ರವೀಶ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಅವರು ವಿದ್ಯಾರ್ಥಿಗಳಿಗೆ ಓಕಾಂಕರ ಹೇಳಿಸುವ ಮೂಲಕ ಪ್ರಾಯೋಗಿಕ ತರಭೇತಿಯನ್ನು ನೀಡಿದರು. ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಜ್ಞಾನ ಮುದ್ರೆ ಹಿಡಿಯುವುದರಿಂದ ಮನಸ್ಸಿನ ಗೃಂಥಿಗಳು ಸಮೃದ್ಧಿಗೊಳ್ಳುತ್ತವೆ. ಇದರಿಂದಾಗಿ ಏಕಾಗೃತೆ ಹೆಚ್ಚುತ್ತದೆ ಎಂದರು. ಆನಂತರ ಮಹೇಶ್ ಪಿಯು ಕಾಲೇಜಿನ ನಿದೇರ್ಶಕರಾದ ಮತ್ತು ಪ್ರಿನ್ಸಿಪಾಲ್ ಡಾ. ನವೀನ್ ಶೆಟ್ಟಿ ಅವರು ಮಾತನಾಡಿ, ಯೋಗ ಎಂಬುವುದು ಮಾನಸಿಕ, ದೈಹಿಕ ಮತ್ತು ಆದ್ಯಾತ್ಮಿಕ ವ್ಯಾಯಾಮ. ಇದು ನಮ್ಮ ಮನಸ್ಸು ಹಾಗೂ ದೇಹವನ್ನು ನಿಯಂತ್ರಿಸಲು ಸಹಕರಿಸುತ್ತದೆ ಎಂದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಮಹೇಶ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಅನಿಲ್ ಮಸ್ಕರೇನಸ್ ಮತ್ತು ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

Leave a Reply