Header Ads
Breaking News

ಮಾಜಿ ಕೇಂದ್ರ ಸಚಿವರಿಗೂ ಮಾರಕ ಕೊರೊನಾ ಅಟ್ಯಾಕ್..!, ದ.ಕ ಜಿಲ್ಲೆಯಲ್ಲಿ ಇಂದು ಕೊರೊನಾ ಶತಕ ಸಾಧ್ಯತೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾದ ಆರ್ಭಟ ಹೆಚ್ಚಾಗಿರುವ ಸೂಚನೆಗಳು ಸಿಗುತ್ತಿವೆ. ದಕ್ಷಿಣ ಕನ್ನಡದಲ್ಲಿಂದು 100ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ವರದಿಯಾಗುವ ಸಾಧ್ಯತೆಯಿದೆ.
ಇಲ್ಲಿಯವರೆಗೆ ಸತತವಾಗಿ 90ರ ಗಡಿ ದಾಟುತ್ತಿದ್ದ ದಕ್ಷಿಣ ಕನ್ನಡದಲ್ಲಿಂದು ಕೊರೊನಾ ಶತಕ ಬಾರಿಸುವ ಸಾಧ್ಯತೆಯಿದೆ. ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹೊಂದಿದವರಲ್ಲೇ ಅಧಿಕ ಜನರಿಗೆ ಸೋಂಕು ತಗುಲಿದೆ ಅಂತ ಹೇಳಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಯಾಣ, ಐಎಲ್‍ಐ, ಸಾರಿ ಪ್ರಕರಣದಿಂದಲೂ ಪಾಸಿಟಿವ್ ಕೇಸ್ ವರದಿಯಾಗುವ ಸಾಧ್ಯತೆಯಿದೆ. ಅಂದಾಜು 140ಕ್ಕೂ ಹೆಚ್ಚು ಪ್ರಕರಣಗಳು ಇಂದು ದಾಖಲಾಗಿದೆ ಎನ್ನಲಾಗಿದೆ. ದಕ್ಷಿಣ ಕನ್ನಡದಲ್ಲಿ ಕೊರೊನಾ ಸಮುದಾಯ ಮಟ್ಟಕ್ಕೆ ಹರಡಿದ್ಯಾ ಅನ್ನುವ ಆತಂಕ ಮನೆ ಮಾಡಿದೆ. ಅದರಲ್ಲೂ ಉಳ್ಳಾಲದಲ್ಲಿ ಏಕಾಏಕಿ ನಡೆಸಿದ ಪರೀಕ್ಷೆಯಲ್ಲಿ ಹೆಚ್ಚಿನ ಜನರಿಗೆ ಕೊರೊನಾ ಬಂದಿದೆ. ಇಂದು ಕೂಡ 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ ಎನ್ನಲಾಗಿದೆ. ಬಂಟ್ವಾಳದಲ್ಲಿ ವಾಸವಾಗಿರುವ ಮಾಜಿ ಕೇಂದ್ರ ಸಚಿವರು, ಕಾಂಗ್ರೆಸ್‍ನ ಮುಖಂಡರಿಗೂ ಕೂಡ ಕೊರೊನಾ ಹಬ್ಬಿದೆ. ಇವರಿಗೆ ಮನೆ ಕೆಲಸದಾಕೆಯಿಂದ ಸೋಂಕು ಹರಡಿದೆ ಎನ್ನಲಾಗಿದೆ. ಸಚಿವರ ಜೊತೆ ಪತ್ನಿಗೂ ಕೂಡ ಕೊರೊನಾ ಹರಡಿದೆ ಎನ್ನಲಾಗಿದೆ. ಹೀಗೆ ರಾಜಧಾನಿ ಬೆಂಗಳೂರು ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದು ಕರಾವಳಿಯಲ್ಲಿ ಆತಂಕ ಹೆಚ್ಟಿಸಿದೆ.

Related posts

Leave a Reply

Your email address will not be published. Required fields are marked *