Header Ads
Header Ads
Breaking News

ಮಾಜಿ ಕೇಂದ್ರ ಸಚಿವ ಧನಂಜಯ್ ಕುಮಾರ್ ನಿಧನ: ಕದ್ರಿ ಕಂಬಳದ ನಿವಾಸದಲ್ಲಿ ಗಣ್ಯರಿಂದ ಅಂತಿಮ ದರ್ಶನ.

ಮಾಜಿ ಕೇಂದ್ರ ಸಚಿವ ವಿ. ಧನಂಜಯ್ ಕುಮಾರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಸಚಿವ ಯು.ಟಿ. ಖಾದರ್ ಸೇರಿದಂತೆ ಇತರ ರಾಜಕೀಯ ಮುಖಂಡರು ಮತ್ತು ಬಂಧುಗಳು ಅಂತಿಮ ದರ್ಶನ ಪಡೆದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಕಳೆದ ಆರು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಹುಟ್ಟೂರು ಮೂಡುಬಿದಿರೆಯ ವೇಣೂರಿನಲ್ಲಿ ಧನಂಜಯ್ ಅವರ ಅಂತ್ಯಕ್ರಿಯೆ ಜೈನ ಧರ್ಮದ ಸಂಪ್ರದಾಯದಂತೆ ನಡೆಯಲಿದೆ.

Related posts

Leave a Reply

Your email address will not be published. Required fields are marked *