Header Ads
Header Ads
Header Ads
Breaking News

ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಪುಣ್ಯತಿಥಿ ಸೀರೆ, ಧೋತಿ ಶಾಲು ನೀಡಿ ವಿಶಿಷ್ಟವಾಗಿ ಆಚರಣೆ ಕುಂದಾಪುರದ ಕೊರಗ ಕಾಲನಿಯ ಸದಸ್ಯರಿಗೆ ವಿತರಣೆ

ಉಡುಪಿ ಜಿಲ್ಲಾ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮತ್ತು ಕುಂದಾಪರ ಯುವ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಪುಣ್ಯತಿಥಿಯನ್ನು ಹನೆಹಳ್ಳಿ ಗ್ರಾಮ ಪಂಚಾಯಿತಿಯ ಬಂಡೀಮಠದ ಕೊರಗ ಕಾಲೋನಿಯಲ್ಲಿ ಸೋಮವಾರ ಕಾಲೋನಿಯ ಸುಮಾರು 14 ಕುಟುಂಬಗಳ ಸದಸ್ಯರಿಗೆ ಸೀರೆ, ಧೋತಿ ಶಾಲು ನೀಡಿ ವಿಶಿಷ್ಟವಾಗಿ ಆಚರಿಸಲಾಯಿತು.

ಈ ಸಂದರ್ಭ ಮಾತನಾಡಿದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಎಲ್ಲರೂ ಸಮಾನತೆಯಿಂದ ಬದುಕಬೇಕು ಎನ್ನುವ ಹಕ್ಕನ್ನು ನೀಡಿದ ಇಂದಿರಾ ಗಾಂಧಿ ಅವರು ಬಡತನ ನಿರ್ಮೂಲನ, ದೇಶದ ಅಭಿವೃದ್ದಿಗೆ ಕಾರಣೀಭೂತರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷೆ ರೋಶನಿ ಒಲಿವೆರಾ, ಕುಂದಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಕೆ.ಪಿ.ಸಿ.ಸಿ ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೋ, ಸಹಕಾರಿ ಸಂಘದ ಧುರೀಣ ಕಿಶನ್ ಹೆಗ್ಡೆ ಕೊಳ್ಕೆಬೈಲು, ತಾಲ್ಲೂಕು ಪಂಚಾಯಿತಿ ಸದಸ್ಯೆ ಡಾ.ಸುನೀತಾ ಡಿ ಶೆಟ್ಟಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಪ್ರಮುಖರಾದ ಅಚ್ಚುತ ಪೂಜಾರಿ, ಗಣೇಶ್, ಸಂಪತ್ ಶೆಟ್ಟಿ, ರಮಾನಂದ ಶೆಟ್ಟಿ, ವಿಜಯ ಗಾಣಿಗ, ದಿನೇಶ್ ಬಂಗೇರ, ಮಂಜುನಾಥ, ರಾಹುಲ್, ಶ್ರೀನಿವಾಸ ವಡ್ಡರ್ಸೆ, ಬಾಲಕೃಷ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಹರೀಶ್ ಕುಂದಾಪುರ

Related posts

Leave a Reply