Header Ads
Header Ads
Header Ads
Breaking News

ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮ ದಿನಾಚರಣೆ ಪ್ರಯುಕ್ತ ಡಿ.25 ರಂದು ಉಚಿತ ಅಕ್ಕಿ ವಿತರಣಾ ಸಮಾರಂಭ ಕಂಕನಾಡಿಯ ಕುದ್ಕೋರಿಗುಡ್ಡೆಯಲ್ಲಿ ನಡೆಯಲಿರುವ ಕಾರ್ಯಕ್ರಮ

 

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಿಚಾರ ಮಂಚ್ ವತಿಯಿಂದ ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮ ದಿನಾಚರಣೆ ಪ್ರಯುಕ್ತ ಉಚಿತ ಅಕ್ಕಿ ವಿತರಣಾ ಸಮಾರಂಭವು ಡಿಸೆಂಬರ್ 25 ರಂದು ಮಂಗಳೂರಿನ ಕಂಕನಾಡಿಯ ಕುದ್ಕೋರಿಗುಡ್ಡೆಯಲ್ಲಿ ನಡೆಯಲಿದೆ ಎಂದು ಬಿಜೆಪಿ ಮುಖಂಡ ಎ.ಬದ್ರಿನಾಥ್ ಕಾಮತ್ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ 2000 ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಎನ್. ಯೋಗೀಶ್ ಭಟ್, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮತ್ತಿತರು ಭಾಗಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಸತೀಶ್ ಪ್ರಭು ಮತ್ತಿತರು ಉಪಸ್ಥತಿರಿದ್ದರು.

Related posts

Leave a Reply