Header Ads
Header Ads
Breaking News

ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಹುಟ್ಟುಹಬ್ಬ : ಪುತ್ತೂರಿನ ಪ್ರಜ್ಞಾ ಬುದ್ಧಿಮಾಂಧ್ಯ ಮಕ್ಕಳ ಜತೆ ಆಚರಣೆ

ಪುತ್ತೂರು : ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಶುಕ್ರವಾರ ಪುತ್ತೂರು ನಗರದ ಹೊರವಲಯದ ಬನ್ನೂರು ಕರ್ಮಲದಲ್ಲಿರುವ ಪ್ರಜ್ಞಾ ಬುದ್ದಿಮಾಂಧ್ಯ ಮಕ್ಕಳ ಜತೆ ತನ್ನ ೭೦ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡು ಸುಮಾರು ೧ ಗಂಟೆಗಳ ಕಾಲ ಬುದ್ಧಿಮಾಂಧ್ಯ ಮಕ್ಕಳ ಜತೆ ಬೆರೆತರು. ಅಲ್ಲಿನ ಮಕ್ಕಳು ಶಕುಂತಳಾ ಶೆಟ್ಟಿ ಅವರಿಗೆ ಗುಲಾಬಿ ಹೂ ನೀಡಿ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಕುಂತಳಾ ಶೆಟ್ಟಿ ಅವರು, ನಾನು ರಾಜಕೀಯದಲ್ಲಿ ಸ್ವಂತ್ರವಾಗಿ ಆಗಿ ಸ್ಪರ್ಧೆ ಮಾಡಿದ ಬಳಿಕ ಸ್ವಾಭಿಮಾನಿ ವೇದಿಕೆಯವರು ಸಣ್ಣಮಟ್ಟದಲ್ಲಿ ನನ್ನ ಜನ್ಮ ದಿನ ಆಚರಿಸಿದರು. ಮೂರು ವರ್ಷದಿಂದ ಬೇರೆ ಬೇರೆ ರೀತಿಯಲ್ಲಿ ಆಚರಣೆ ಆಗಿದೆ. ಕಳೆದ ವರ್ಷ ನಾಲ್ಕು ವಿಶೇಷ ಕಾರ್ಯಕ್ರಮ ಮಾಡಲಾಗಿತ್ತು. ಜಿಡೆಕಲ್ಲಿನ ಅನಾಥ ಆಶ್ರಮದ ಮಕ್ಕಳಿಗೆ ಊಟದ ವ್ಯವಸ್ಥೆಯೊಂದಿಗೆ ಆಚರಣೆ ಮಾಡಲಾಯಿತು. ಈ ಬಾರಿ ಬುದ್ದಿಮಾಂಧ್ಯ ಮಕ್ಕಳ ಜತೆ ಆಚರಣೆ ಮಾಡುವಲ್ಲಿ ಸಂತೋಷ ಸಮಾಧಾನ ಸಿಕ್ಕಿದೆ ಎಂದರು.

ಮನೆಯಲ್ಲಿ ಎಷ್ಟೇ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿದರೂ ಇಲ್ಲಿ ಮಕ್ಕಳ ಮಧ್ಯೆ ಕಳೆಯುವಾಗ ಸಿಗುವ ಸಂತೋಷ ಬೆರೆಲ್ಲೂ ಸಿಗುವುದಿಲ್ಲ. ಏನು ಅರಿಯದ ಮುಗ್ಧರು ಇಲ್ಲಿದ್ದಾರೆ. ಅವರಿಗೆ ದೇವರು ಒಳ್ಳೆಯ ಆರೋಗ್ಯ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು. ಪುತ್ತೂರಿನ ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ವಕೀಲೆ ಹರೀಣಾಕ್ಷಿ ಜೆ ಶೆಟ್ಟಿ, ಮನಮೋಹನ್ ರೈ, ರಾಜೇಶ್ವರಿ, ತುಳಸಿ, ಚಿತ್ರ, ಪ್ರಜ್ಞಾ ಬುದ್ದಿಮಾಂದ್ಯ ಸೆಂಟರ್‌ನ ಅಣ್ಣಪ್ಪ ಮತ್ತು ಜ್ಯೋತಿ ಇದ್ದರು.

Related posts

Leave a Reply

Your email address will not be published. Required fields are marked *