Header Ads
Header Ads
Breaking News

ಕೆಫೆ ಕಾಫಿಡೇ ಮಾಲಕ, ಮಾಜಿ ಸಿಎಂ ಎಸ್.ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಉಳ್ಳಾಲ ನೇತ್ರಾವತಿ ನದಿ ಬಳಿ ದಿಢೀರ್ ನಾಪತ್ತೆ..!

ಮಾಜಿ ವಿದೇಶಾಂಗ ಸಚಿವ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ದಿಢೀರ್ ಆಗಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದಾರೆ. 

ಸಿದ್ಧಾರ್ಥ್ ಅವರು ನೇತ್ರಾವತಿ ನದಿಗೆ ಹಾರಿರುವ ಶಂಕೆಯಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಮತ್ತು ಮುಳುಗು ತಜ್ಞರು ನೇತ್ರಾವತಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಉಳ್ಳಾಲ ಬಳಿಯ ನೇತ್ರಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಶೋಧ ಕಾರ್ಯಾಚರಣೆಗೆ ಸ್ವಲ್ಪ ಅಡ್ಡಿಯುಂಟಾಗಿದೆ ಎನ್ನಲಾಗಿದೆ. ಆದರೂ ತಣ್ಣೀರುಬಾವಿ ಮುಳುಗು ತಜ್ಞರು ಬಿಟ್ಟೂ ಬಿಡದಂತೆ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಸೋಮವಾರ ಮಂಗಳೂರಿಗೆ ತೆರಳಲು ಮುಂದಾಗಿದ್ದ ಸಿದ್ಧಾರ್ಥ ಅವರು ತೊಕ್ಕೊಟ್ಟು ಸೇತುವೆ ಬಳಿ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದರು. ಬಳಿಕ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಸೇತುವೆಯ ಮಧ್ಯಭಾಗಕ್ಕೆ ತೆರಳಿದ್ದ ಅವರು, ನಂತರ ಕಣ್ಮರೆಯಾಗಿದ್ದರು. ತುಂಬಾ ಹೊತ್ತು ಕಾದ ಬಳಿಕ ಅವರ ಮೊಬೈಲ್ ಫೋನ್‌ಗೆ ಚಾಲಕ ಕರೆ ಮಾಡಿದಾಗ, ಅದು ಸ್ವಿಚ್ ಆಫ್ ಆಗಿತ್ತು. ತಕ್ಷಣವೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಮೊಬೈಲ್ ಫೋನ್‌ನ ಲೊಕೇಷನ್ ಟ್ರೇಸ್ ಮಾಡಿದಾಗ ಅದು ನದಿಯ ಮಧ್ಯಭಾಗದಲ್ಲಿ ತೋರಿಸುತ್ತಿತ್ತು. ಹಾಗಾಗಿ ಸಿದ್ಧಾರ್ಥ ಅವರು ನದಿಗೆ ಹಾರಿರುವ ಶಂಕೆಯಲ್ಲಿ ಶೋಧಿಸಲಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಶೋಧಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ಮೂರು ದಿನಗಳ ಹಿಂದೆ ಸಿದ್ದಾರ್ಥ್ ಅವರು ತಮ್ಮ ಸ್ನೇಹಿತರಿಗೆ ಬರೆದಿರುವ ಪತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ನಾನು ಉದ್ಯಮಿಯಾಗಿ ವಿಫಲನಾಗಿದ್ದೇನೆ, ನನ್ನೆಲ್ಲಾ ತಪ್ಪು ನಿರ್ಧಾರಗಳಿಗೆ ನಾನೇ ಕಾರಣ. ವ್ಯವಹಾರದಲ್ಲಿ ನಷ್ಟ, ಐಟಿ ಅಧಿಕಾರಿಗಳ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ. ಜೊತೆಗೆ ಆಡಿಟರ್‌ಗಳ ಕಣ್ತಪ್ಪಿಸಿ ನಾನು ಹಣ ವರ್ಗಾವಣೆ ಮಾಡುತ್ತಿದ್ದೆ ಎನ್ನುವ ವಿಚಾರವನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಐಟಿ ಇಲಾಖೆಯ ಡಿಜಿ ಕಿರುಕುಳ ನೀಡುತ್ತಿದ್ದರು ಎನ್ನುವ ಬಗ್ಗೆ ಸಿದ್ದಾರ್ಥ್ ಅವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

Related posts

Leave a Reply

Your email address will not be published. Required fields are marked *