Header Ads
Header Ads
Breaking News

ಮಾಣಿಯಿಂದ ಮುಂದೆ ರಸ್ತೆಗೆ ಬಿದ್ದ ಮರ, ವಿದ್ಯುತ್ ತಂತಿ ಹರಿದರೂ ಪಾರಾದ ಜನರು

ಮಾಣಿ ಮೈಸೂರು ರಸ್ತೆಯ ಮುರ ಸಮೀಪದ ಪೋಳ್ಯದಲ್ಲಿ ವಿದ್ಯುತ್ ತಂತಿ ಮೇಲೆ ಮರಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.
ಇದೇ ವೇಳೆ ಬೈಕ್ನಲ್ಲಿ ತೆರಳುತ್ತಿದ್ದ ನಗರದ ಖಾಸಗಿ ಬ್ಯಾಂಕ್ವೊಂದರ ಉದ್ಯೋಗಿ ಕಾರ್ತಿಕ್ ಅವರ ಎದುರಲ್ಲಿ ವಿದ್ಯುತ್ ತಂತಿ ಬಿದ್ದಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಸಾರ್ವಜನಿಕರು ಮರ ತೆರವು ಕಾರ್ಯದಲ್ಲಿ ಪಾಲ್ಗೊಂಡು, ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು. ಸ್ಥಳಕ್ಕೆ ಪುತ್ತೂರು ಸಂಚಾರ ಠಾಣೆಯ ಪೊಲೀಸರು, ಮೆಸ್ಕಾಂ ಸಿಬಂದಿ ಭೇಟಿ ನೀಡಿದರು.

Related posts

Leave a Reply