Header Ads
Header Ads
Breaking News

ಮಾಣಿಯ ಬಿ.ಎಂ.ಆರ್ ಎಂಟರ್ ಪ್ರೈಸಸ್‌ನ ವಾರ್ಷಿಕೋತ್ಸವ

ಮಾಣಿಯ ಬಿ.ಎಂ.ಆರ್ ಎಂಟರ್ ಪ್ರೈಸಸ್ ಇದರ 15 ನೇ ವಾರ್ಷಿಕೋತ್ಸವದ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಎ.ಜೆ ಆಸ್ಪತ್ರೆ ರಕ್ತ ನಿಧಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಮಾಣಿಯ ಬಿ.ಎಂ.ಆರ್ ಪೆಟ್ರೋಲ್ ಬಂಕ್ ವಠಾರದಲ್ಲಿ ನಡೆಯಿತು.ಸುಲ್ತಾನ್ ಗ್ರೂಫ್‌ನ ಹಾಜಿ ಬಿ.ಉಮ್ಮರ್ ಫಾರೂಕ್ ಕೊಡಾಜೆ ರವರ ಅಧ್ಯಕ್ಷತೆಯಲ್ಲಿ ಬಹು ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಉಸ್ತಾದ್ ರವರು ದುಃವಾಶೀರ್ವಚನ ನೀಡಿದರು.ರಕ್ತ ದಾನ ಶಿಬಿರದಲ್ಲಿ ಒಟ್ಟು 61 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಎ.ಜೆ ಆಸ್ಪತ್ರೆ ಮಂಗಳೂರು ಇದರ ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೂ ಬಿ ಎಂ ಆರ್ ಸಂಸ್ಥೆಯ ವತಿಯಿಂದ ಸಹ ಸಂಸ್ಥೆಗಳ ಲಾಂಛನವಿದ್ದ ಟಿ ಶರ್ಟ್ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಿ.ಗಂಗಾಧರ ರೈ, ಜಗನ್ನಾಥ ಚೌಟ, ಸುದೀಪ್ ಕುಮಾರ್ ಶೆಟ್ಟಿ, ಫೈಝಲ್ ಮಂಚಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಮತ್ತು ಬಿ ಎಂ ಆರ್ ಎಂಟರ್ಪ್ರೈಸಸ್ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *