Header Ads
Breaking News

ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 53ನೇ ವಾರ್ಷಿಕ ಜಾತ್ರೋತ್ಸವ

ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಮಾರ್ಗದರ್ಶನದಲ್ಲಿ ನಡೆದ 53ನೇ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಮಂಗಳವಾರ ನಾನಾ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಮಾ. 9ರಂದು ಶ್ರೀಗಣಪತಿ ಹೋಮದ ಬಳಿಕ ಶ್ರೀದೇವಿಯ ಕಲಶ ಪ್ರತಿಷ್ಠೆ, ಬಳಿಕ ನಾನಾ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು. ಮಂಗಳವಾರ ಪ್ರಾತಃ ಕಾಳ ಶ್ರೀ ಗಣಪತಿ ಹೋಮ, ಶ್ರೀ ನರಸಿಂಹ ಮಂಡಲ ಪೂಜೆ, ತುಲಾಭಾರ ಸೇವೆ, ಮಹಾಪೂಜೆ ನಡೆಯಿತು. ಆ ಬಳಿಕ ಶ್ರೀ ದೇವಿಯ ಉತ್ಸವ ಮೂರ್ತಿಯ ಬಲಿ ಉತ್ಸವ, ಪಲ್ಲಕಿ ಉತ್ಸವ ನಡೆಯಿತು. ಶ್ರೀ ದೇವಿಗೆ ಅಲಂಕಾರ ಪೂಜೆ, ಹೂವಿನ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಊರಪರವೂರಿನ ಅಪಾರ ಸಂಖ್ಯೆಯ ಭಕ್ತರು ಇದ್ದರು. ಸಂಜೆ ದೀಪಾರಾಧನೆ, ಆಂಜನೇಯ ಸ್ವಾಮಿಯ ಮಹಾಪೂಜೆ ನಡೆಯಿತು.

Related posts

Leave a Reply

Your email address will not be published. Required fields are marked *