Header Ads
Header Ads
Header Ads
Breaking News

ಮಾಣಿಲ ಶ್ರೀಧಾಮದ ಮಹಾಲಕ್ಷ್ಮೀ ಕ್ಷೇತ್ರ 18 ರಿಂದ ಫೆಬ್ರವರಿ 24 ರವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವ

ಫೆಬ್ರವರಿ 18 ರಿಂದ ಫೆಬ್ರವರಿ 24 ರವರೆಗೆ ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಪೂರ್ವಭಾವಿ ಸಭೆ ಕ್ಷೇತ್ರದಲ್ಲಿ ನಡೆಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಈ ಸಂದರ್ಭ ವಿ4 ನ್ಯೂಸ್‌ನೊಂದಿಗೆ ಮಾತನಾಡಿ ಮಾಣಿಲ ಶ್ರೀಧಾಮವು ಕಳೆದ 18 ವರ್ಷಗಳಿಂದ ಮಾಣಿಲ ಶ್ರೀ ಮಹಾಲಕ್ಷ್ಮೀ ಪ್ರತಿಷ್ಠಾನ ಎನ್ನುವ ಸಂಸ್ಥೆಯೊಂದಿಗೆ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದೆ.

ಸಮಾಜದಲ್ಲಿನ ದುಶ್ಚಟಗಳನ್ನು ದೂರಮಾಡಿ, ಋಣಾತ್ಮಕವಾದ ಪ್ರತಿಕ್ರಿಯೆಗಳನ್ನು ದೂರಮಾಡಿ ಧನಾತ್ಮಕವಾಗ ಮೌಲಿಕ ಬದುಕನ್ನು ಕೊಡುವ ಕಾರ್ಯವನ್ನು ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು. ಫೆ.18 ರಿಂದ ಫೆ.24 ರವರೆಗೆ ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ, ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ, ಪ್ರತಿಷ್ಠಾ ವರ್ಧ್ಯಂತ್ಯುತ್ಸವ ನಡೆಯಲಿದ್ದು ಯುವ ಪರಿವರ್ತನೆಗೆ ಪೂರಕವಾಗಿ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ದೇಶವ ವಿವಿಧ ಭಾಗಗಳಿಂದ ಭಕ್ತರು ಈ ಸತ್ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Related posts

Leave a Reply