Header Ads
Header Ads
Breaking News

ಮಾಣಿಲ ಶ್ರೀ ಮಹಾಲಕ್ಷ್ಮಿಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ

ವಿಟ್ಲ: ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ನೇತೃತ್ವದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ, ಪ್ರತಿಷ್ಠಾ ವರ್ಧಂತ್ಯುತ್ಸವ, ಶ್ರೀ ದೈವಗಳ ನೇಮೋತ್ಸವದ ಪ್ರಯುಕ್ತ ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸ್ವರ್ಣ ಮಂಟಪದ ಮೆರವಣಿಗೆ ಆರಂಭಗೊಂಡಿತು.

ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಧಾನ ಅರ್ಚಕರದ ಶ್ರೀನಿವಾಸ ಐತಾಳ್ ರವರು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸ್ವರ್ಣ ಮಂಟಪಕ್ಕೆ ಪೂಜೆ ನಡೆಸಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಮಾಣಿಲ ಶ್ರೀಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾಣಿಲದಲ್ಲಿ ನಡೆಯತಕ್ಕಂತಹ ಅಷ್ಟಪವಿತ್ರ ನಾಗಮಂಡಲೋತ್ಸವವು ಅತ್ಯಂತ ಯಶಸ್ವಿಯಾಗಿ ನಡೆಯಬೇಕು ಅದಕ್ಕಾಗಿ ಭಕ್ತರು ಸಲ್ಲಿಸಿದ ಹಸಿರುವಾಣಿ ಹೊರೆಕಾಣಿಕೆ ಮತ್ತು ಸ್ವರ್ಣ ಮಂಟಪದ ಮೆರವಣಿಗೆಯು ಯಶಸ್ವಿಯಾಗಿ ವಿಘ್ನರಹಿತವಾಗಿ ಸಾಗಲಿ ಎಲ್ಲಾ ಹೃಣಾತ್ಮಕ ಅಂಶಗಳು ದೂರವಾಗಿ ಧನಾತ್ಮಕವಾಗಿ ಪ್ರಜ್ವಲಿಸಲಿ ಎಂದು ಹಾರೈಸಿದರು.
ಕೊಂಡೆಯೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಡಾ.ಅಣ್ಣಯ್ಯ ಕುಲಾಲ್ ಮಂಗಳೂರು, ಜಿಲ್ಲಾ ಬಿ.ಜೆ.ಪಿ ವಕ್ತಾರ ಜಿತೇಂದ್ರ ಎಸ್ ಕೊಟ್ಟಾರಿ, ಚಂದ್ರಶೇಖರ್ ಮೂಲ್ಯ ದುಬೈ, ನಾಗಮಂಡಲೋತ್ಸವ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಗೌರವ ಸಲಹೆಗಾರ ತಾರನಾಥ ಕೊಟ್ಟಾರಿ, ವಾಸುದೇವ ಆರ್ ಕೊಟ್ಟಾರಿ ಪಡೀಲ್, ಪ್ರಧಾನ ಕಾರ್ಯದರ್ಶಿ ಉಮೇಶ್ ಪಿ.ಕೆ ನಾಗಲಚ್ಚಿಲ್, ಒಡಿಯೂರು ಶ್ರೀಗುರುದೇವ ಸೇವಾ ಬಳಗದ ಮಂಗಳೂರು ಘಟಕದ ಅಧ್ಯಕ್ಷ ಜಯಂತ್ ಜೆ ಕೋಟ್ಯಾನ್, ಬಿ.ಕೆ ಚಂದ್ರಶೇಖರ್, ರೂಪೇಶ್ ರೈ ಅಳಿಕೆಗುತ್ತು, ರಾಜಶೇಖರ ಶೆಟ್ಟಿ ತಾಳಿಪಡ್ಪು ಹಾಗೂ ವಿವಿಧ ಭಾಗಗಳ ಶ್ರೀಧಾಮ ಸೇವಾಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply