Header Ads
Breaking News

ಮಾಣಿ : ಅನುಮಾನಸ್ಪದವಾಗಿ ನಿಂತಿದ್ದ ಇಬ್ಬರು ವ್ಯಕ್ತಿಗಳ ಬಂಧನ

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ಇಬ್ಬರು ವ್ಯಕ್ತಿಗಳ ಬಂಧನ ಘಟನೆ ನಡೆದಿದೆ. ವಿಟ್ಲದ ಪಿಎಸ್‌ಐ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿರುವಾಗ ಒಂದು ಗೋಣೊಚೀಲವನ್ನ ಹಿಡಿದುಕೊಂಡು ಅನುಮಾನಾಸ್ಪದವಾಗಿ ನಿಂತಿರುವುದನ್ನ ಕಂಡು ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡಿದೇ ಇದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರಲ್ಲಿದ್ದ ಗೋಣಿ ಚೀಲವನ್ನ ಪರಿಶೀಲಿಸಿದಾಗ 2 ಹಳೇಯ ಪಂಪ್‌ಗಳು, 1 ಆಟೋರಿಕ್ಷಾದ ಹಳೇಯ ಡಿಸ್ಕ್ ಒಟ್ಟು2000ರೂ ಮೌಲ್ಯದ ಸೊತ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊಹಮ್ಮದ್ ಸಿಹಾನ್ ಹಾಗೂ ಜೋಯ್ಸನ್ ಬಂಧಿತ ಆರೋಪಿಗಳು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *