Header Ads
Header Ads
Header Ads
Breaking News

ಮಾತೃಪೂರ್ಣ ಯೋಜನೆ ಅನುಷ್ಠಾನ ಕ್ರಮ ಮರ್ಪಾಡುಗೊಳಿಸಿ ಅಂಗನವಾಡಿ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಕಸ ವಸ್ತುಗಳ ಸಂಗ್ರಹಣೆ ನಿಲ್ಲಿಸಿ ಬಂಟ್ವಾಳ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಂದ ಮನವಿ

ಬಂಟ್ವಾಳ: ರಾಜ್ಯ ಸರಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯ ಅನುಷ್ಠಾನ ಕ್ರಮಗಳನ್ನು ಮಾರ್ಪಡುಗೊಳಿಸಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಕಸ ವಸ್ತಗಳ ಸಂಗ್ರಹಣೆಯನ್ನು ನಿಲ್ಲಿಸಬೇಕು, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆಯನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ.

ಶನಿವಾರ ಬೆಳಿಗ್ಗೆ ಸಚಿವರ ಕಳ್ಳಿಗೆ ನಿವಾಸದಲ್ಲಿ ಭೇಟಿ ಮಾಡಿ ಮಾತೃಪೂರ್ಣ ಯೋಜನೆಯ ಸಮಸ್ಯೆಯ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ದ.ಕ. ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನದ ಹಿನ್ನಡೆಯ ಬಗ್ಗೆ ಅರಿವಿದೆ. ಇದು ಸರಕಾರದ ಮಟ್ಟದಲ್ಲಿ ಆಗಬೇಕಾದ ಕಾರ್ಯವಾಗಿದ್ದು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವ ರಮಾನಾಥ ರೈ ಭರವಸೆ ನೀಡಿದರು.

ಸಂಘದ ಅಧ್ಯಕ್ಷೆ ಉಮಾವತಿ ಸುದ್ದಿಗಾರರೊಂದಿಗೆ ಮಾತನಾಡಿ ಸರಕಾರ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆಯನ್ನು ನಾವು ಸ್ವಾಗತಿಸುತ್ತೇವೆ. ಆಧರೆ ಈ ಯೋಜನೆಯ ಯಥಾವತ್ತಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಗರ್ಭಿಣಿ, ಬಾಣಾಂತಿಯರು ದಿನಂಪ್ರತಿ ಅಂಗನವಾಡಿ ಕೇಂದ್ರಕ್ಕೆ ಆಹಾರ ಸೇವಿಸಲು ಬರುತ್ತಿಲ್ಲ. ತಮ್ಮ ಮನೆಗಳಿಂದ ಅಂಗನವಾಡಿ ಕೇಂದ್ರಕ್ಕೆ ಇರುವ ದೂರ ಮಳೆ, ಬಿಸಿಲು, ಏರಿಳಿತ ಪ್ರದೇಶ, ಆರೋಗ್ಯ ಸಮಸ್ಯೆ ಮೊದಲಾದ ಕಾರಣಗಳಿಂದ ಫಲಾನುಭವಿಗಳು ದಿನಂಪತ್ರಿ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಇದರಿಂದಾಗಿ ಶೇ.10 ರಷ್ಟು ಈ ಯೋಜನೆ ಯಶಸ್ಸುನ್ನು ಕಂಡಿಲ್ಲ ಎಂದರು. ಈ ನಡುವೆ ಪ್ಲಾಸ್ಟಿಕ್ ಮುಕ್ತ ಗ್ರಾಮದ ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರಗಳ ಪರಿಸರದ ಮನೆಗಳ ಪ್ಲಾಸ್ಟಿಕ್ ಕಸವನ್ನು ಅಂಗನವಾಡಿ ಕೇಂದ್ರಗಳಲ್ಲಿ ಶೇಖರಿಸಿ ಪಂಚಾಯಿತಿ ವ್ಯವಸ್ಥೆಯ ಮೂಲಕ ವಿಲೇವಾರಿಗೊಳಿಸುವ ಜವಬ್ದಾರಿಯನ್ನು ಕಾರ್ಯಕರ್ತೆಯರ ಮೇಲೆ ಹೊರಿಸಿ ಹೆಚ್ಚುವರಿ ಹೊರೆ ನೀಡಲಾಗಿದೆ. ಪ್ಲಾಸ್ಟಿಕ್ ಸಂಗ್ರಹಣೆಯಿಂದ ಪುಟಾಣಿ ಮಕ್ಕಳ ಪ್ರಾಣಕ್ಕೆ ಅಪಾಯಗಳು ಎದುರಾಗುವ ಭೀತಿ ಇದೆ ಎಂದು ಆರೋಪಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮತ್ತು ಕುಟುಂಬ ಸದಸ್ಯರಿಗೆ ೨ ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಶೀಘ್ರ ಜಾರಿಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭ ಸಂಘದ ಗೌರವಾಧ್ಯಕ್ಷೆ ರೇಣುಕಾ ಪೊಳಲಿ, ಕಾರ್ಯದರ್ಶಿ ರೇಖಾ ಇರಾ, ಕಾರ್ಯಧ್ಯಕ್ಷೆ ಭಾರತಿ ಕೊಳ್ನಾಡು, ಉಪಾಧ್ಯಕ್ಷೆ ಜಯಶ್ರೀ ವಿಟ್ಲ, ಮಾಜಿ ಅಧ್ಯಕ್ಷೆ ವಸಂತಿ, ಸಂಘಟನಾ ಕಾರ್ಯದರ್ಶಿ ವಿಜಯವಾಣಿ ಶೆಟ್ಟಿ, ಸುಜಾತ ಬಾರಿಂಜ, ಪ್ಲಾಸಿಡ್ ಡಿಸೋಜಾ, ಶ್ರೀವಾಣಿ ಬಿ.ಸಿ.ರೋಡು, ವಲಯ ಪ್ರಮುಖರಾದ ಯಶೋಧ ಕಲ್ಲಗುಡ್ಡೆ, ಸುರೇಖಾ ಕುದ್ರೆಬೆಟ್ಟು ಮತ್ತಿತರರು ಹಾಜರಿದ್ದರು.

Related posts

Leave a Reply