Header Ads
Header Ads
Breaking News

ಮಾತೆ ದೇಯಿಬೈದೆತಿ,ಕೋಟಿ ಚೆನ್ನಯ  ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯಿಂದ ಡಾ! ಹೆಗ್ಗಡೆ ಭೇಟಿ”

ಬೆಳ್ತಂಗಡಿ ಜುಲೈ 10 : ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ! ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತೆ  ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಪುತ್ತೂರಿನ  ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್’ನಲ್ಲಿ  ನಿರ್ಮಾಣ ಗೊಳ್ಳುತ್ತಿರುವ ವಿವಿಧ ಶ್ರದ್ದಾ ಕೇಂದ್ರಗಳ ಪುನರುತ್ಥಾನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಕೋಟಿ ಚೆನ್ನಯ ಮೂಲಸ್ಥಾನ ಗರೋಡಿ, ದೇಯಿ ಬೈದ್ಯೆತಿ – ಗುರು ಪಟ್ಟದ ಸಾಯನ ಬೈದ್ಯರ ಧರ್ಮ ಚಾವಡಿ, ಆದಿದೈವ ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ, ಕೊರತಿ ದೈವಗಳ ಸಾನಿಧ್ಯ, ಸರೋಳಿ ಸೈಮಂಜ ಕಟ್ಟೆ, ದೇಯಿ ಬೈದ್ಯೆತಿ ಮಹಾ ಸಮಾಧಿ, ಬೆರ್ಮೆರೆ ಗುಂಡ ಇವೇ ಮುಂತಾದ ಶ್ರದ್ದಾ ಬಿಂದುಗಳ ಪುನರುತ್ಥಾನ ಯೋಜನೆಯ ಕೆಲಸ ಕಾಮಗಾರಿಗಳು ಕ್ಷೇತ್ರದಲ್ಲಿ ಭರದಿಂದ ಸಾಗುತ್ತಿರುವ ವಿಚಾರ ತಿಳಿದು ಡಾ! ವೀರೇಂದ್ರ ಹೆಗ್ಗಡೆಯವರು ಹರ್ಷ ವ್ಯಕ್ತ ಪಡಿಸಿದರು.
ಶಾಸ್ತ್ರೀಯ ರೀತಿಯ ವಿನ್ಯಾಸದ,    ಸತ್ಯ ಧರ್ಮದಲ್ಲಿ ಬಾಳಿ ಬದುಕಿದ ಮಹಾ ಮಾತೆ ದೇಯಿಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನದ ಕುರುಹುಗಳನ್ನು ಉಳಿಸಿಕೊಂಡು ಪುನರುತ್ಥಾನದ ಯೋಜನೆಯು  ಸಾಕಾರಗೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ   ವ್ಯಕ್ತಪಡಿಸುವುದರೊಂದಿಗೆ ಮೂಲಸ್ಥಾನದ ಪುನರುತ್ಥಾನ ಯೋಜನೆಯ ನೀಲ ನಕ್ಷೆಯನ್ನು ಪರಿಶೀಲಿಸಿ ಗೆಜ್ಜೆಗಿರಿಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತಾಭಿಮಾನಿಗಳಿಗೆ ಮೂಲ ಸೌಕರ್ಯ ಒದಗಿಸುವ ವ್ಯವಸ್ಥೆಗಳನ್ನು ಕೂಡ ಮಾಡುವಂತೆ ಸಲಹೆ ನೀಡಿದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಡಾ! ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಕ್ಷೇತ್ರದ ತಾಂತ್ರಿಕ ಸಲಹೆಗಾರರಾದ ಆರ್ಟಿಟೆಕ್  ಸಂತೋಷ್ ಕುಮಾರ್ ಎಸ್.ಕೆ ಬಿಲ್ಡರ್ಸ್ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರು ಚಿತ್ತರಂಜನ್ ಕಂಕನಾಡಿ, ಕಾರ್ಯಧ್ಯಕ್ಷರು ಪೀತಾಂಬರ ಹೇರಾಜೆ, ಜಯಂತ ನಡುಬೈಲ್, ಉಪಾಧ್ಯಕ್ಷರು ಡಾ! ರಾಜಶೇಖರ ಕೋಟ್ಯಾನ್, ಕ್ಷೇತ್ರದ ಅನುವಂಶಿಕ ಮೊಕ್ತೇಸರ  ಶ್ರೀಧರ ಪೂಜಾರಿ, ತಂತ್ರಿಗಳಾದ ಲೋಕೇಶ್ ಶಾಂತಿ, ಸಂತೋಷ್ ಕೋಟ್ಯಾನ್ ಉಗ್ಗೆಲ್ ಬೆಟ್ಟು, ರವಿ ಪೂಜಾರಿ ಚಿಲಿಂಬಿ, ಚಂದ್ರಶೇಖರ ಉಚ್ಚಿಲ್, ಸೋಮನಾಥ ಬಂಗೇರ, ಸಧಾನಂದ್ ಉಂಗಿಲಬೈಲು ಹಾಗು ಇನ್ನಿತರ ಗಣ್ಯರು,  ಪ್ರಮುಖರು ಉಪಸ್ಥಿತರಿದ್ದರು.

Related posts

Leave a Reply