Header Ads
Header Ads
Breaking News

ಮಾದಕ ದ್ರವ್ಯ ವಿರೋಧಿ ತಿಳುವಳಿಕಾ ಶಿಬಿರ

ಮಂಜೇಶ್ವರ: ಒ ಆರ್ ಸಿ ವತಿಯಿಂದ ಜಿವಿ‌ಎಚ್ ಎಸ್ ಎಸ್ ಕುಂಜತ್ತೂರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗಾಗಿ ಮಾದಕ ದ್ರವ್ಯ ವಿರೋಧಿ ತಿಳುವಳಿಕಾ ಶಿಬಿರ ಜರಗಿತು. ಶಾಲೆಯ ನಿವೃತ ಶಿಕ್ಷಕರೂ ಹಿತೈಷಿಗಳು ಆಗಿರುವ ಈಶ್ವರ ಮಾಸ್ಟರ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಗಾರವನ್ನು ಶಾಲಾ ಪ್ರಾಂಶುಪಲರಾದ ಶ್ರೀ ಅಗಸ್ಟಿನ್ ಬರ್ನಾಡ್ ಮೊಂತೇರೋ ಉದ್ಘಾಟಿಸಿದರು.

ಸೆಂಟ್ರಲ್ ಯುನಿವರ್ಸಿಟಿ ಪ್ರೊಫೆಸರ್ ಜಿಲ್ಲಿ ಜೋರ್ಜ್ ಮಾದಕ ದ್ರವ್ಯ ವಿರೋಧಿ ಬಗ್ಗೆ ಉತ್ತಮವಾದ ತರಗತಿಯನ್ನು ನಡೆಸಿ ಕಾರ್ಯಕ್ರಮದ ರೂಪು ರೇಖೆಗಳ ಬಗ್ಗೆ ಸಮಗ್ರವದ ಮಾಹಿತಿಯನ್ನು ನೀಡಿದರು.
ಹಿರಿಯ ಶಿಕ್ಷಕಿ ಪ್ರಸನ್ನ ಕುಮಾರಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯು ಎಚ್ ಅಬ್ದುಲ್ ರಹ್ಮಾನ್, ಧೈಹಿಕ ಶಿಕ್ಷಕಿ ಅನಿತಾ ಮೊದಲಾದವರು ಉಪಸ್ಥರಿದ್ದರು.

Related posts