Header Ads
Header Ads
Breaking News

ಮಾದಕ ದ್ರವ್ಯ ವಿರೋಧಿ ಮಾಸಾಚರಣೆ : ಕಾರ್ಕಳದಲ್ಲಿ ಬೃಹತ್ ವಾಕಥಾನ್

ಕಾರ್ಕಳ: ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಜಿಲ್ಲಾ ಪ್ರೆಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಕಾರ್ಕಳ ಇದರ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ಮಾಸಾಚರಣೆ ಪ್ರಯುಕ್ತ ಬೃಹತ್ ಜಾಥ ವಾಕಥ್ಯಾನ್ ಆಯೋಜಿಸಲಾಯಿತು. ನಗರದ ಅನಂತಶಯನ ದೇವಸ್ಥಾನ ಮುಂಭಾಗದಿಂದ ಹೊರಡುವ ಜಾಥಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ. ನಿಂಬರ್ಗಿ ಚಾಲನೆ ನೀಡಿದರು.

ಸಭಾಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಸಕ ವಿ.ಸುನೀಲ್‌ಕುಮಾರ್, ಮಾಜಿ ಶಾಸಕ ಹೆಚ್.ಗೋಪಾಲ ಭಂಡಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಚಂದ್ರ, ತಹಶೀಲ್ದಾರ್ ಮಹಮ್ಮದ್ ಇಸಾಕ್, ನಿಟ್ಟೆ ವಿದ್ಯಾ ಸಂಸ್ಥೆಯ ರಿಜಿಸ್ಟ್ರರ್ ಯೋಗೀಶ್ ಹೆಗ್ಡೆ, ರೋ. ಸೂರ್ಯಕಾಂತ್ ಶೆಟ್ಟಿ, ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಬೋಳ ಪ್ರಭಾಕರ್ ಕಾಮತ್, ಗಣಪತಿ ಹೆಗ್ಡೆ, ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ಕುಮಾರ್ ಕಟೀಲ್ ಪಾಲ್ಗೊಂಡಿದ್ದರು.ಜಾಥದಲ್ಲಿ ನ್ಯಾಯಾಲಯದ ನ್ಯಾಯಧೀಶರು. ವಿವಿಧ ಇಲಾಖಾಧಿಕಾರಿಗಳು, ಜನಪ್ರತಿನೀಧಿಗಳು, ಶಾಲಾ ವಿಧ್ಯಾರ್ಥಿಗಳು, ಎಸ್‌ಎಸ್‌ಸಿ ಕ್ಯಾಡೆಟ್‌ಗಳು, ಪೊಲೀಸ್ ಸಿಬ್ಬಂದಿಗಳು, ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಒಳಗೊಂಡಿದ್ದರು.

Related posts

Leave a Reply